ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಸಕ್ರಿಯ ಪ್ರಕರಣಗಳು14,358ಕ್ಕೆ ಇಳಿಕೆಯಾಗಿವೆ. ಮೃತರ ಪ್ರಮಾಣವು ಅಲ್ಪ ಏರಿದೆ. ಸೋಮವಾರ ಒಟ್ಟು 24 ಮಂದಿ ಅಸುನೀಗಿದ್ದು, ಸಾವಿಗೀಡಾದವರ ಒಟ್ಟು ಸಂಖ್ಯೆ37,627ಕ್ಕೆ ಹೆಚ್ಚಿದೆ. ಮರಣ ಪ್ರಮಾಣ ದರವು ಶೇ 3.54ರಷ್ಟಿದೆ.

ಹಿಂದಿನ 24 ಗಂಟೆಗಳಲ್ಲಿ677 ಜನರಲ್ಲಿ ಸೋಂಕು ದೃಢಪಟ್ಟಿದೆ. ಸೋಂಕಿತರ ಒಟ್ಟು ಸಂಖ್ಯೆ29.68 ಲಕ್ಷಕ್ಕೆ ಏರಿಕೆಯಾಗಿದೆ. ಕೋವಿಡ್ ದೃಢ ಪ್ರಮಾಣವು ಶೇ0.60ರಷ್ಟಿದೆ. ಒಂದು ದಿನದಲ್ಲಿ1,678 ಮಂದಿಗೆ ಕಾಯಿಲೆ ವಾಸಿಯಾಗಿದೆ. ಇದರಿಂದಾಗಿ ಗುಣಮುಖರ ಒಟ್ಟು ಸಂಖ್ಯೆಯು29.16 ಲಕ್ಷಕ್ಕೆ ಹೆಚ್ಚಿದೆ.

ಕೋವಿಡ್ ಪರೀಕ್ಷೆಗಳ ಸಂಖ್ಯೆ ಮತ್ತೆ ಇಳಿದಿದೆ. ಸೋಮವಾರ 1.12 ಲಕ್ಷ ಮಾದರಿಗಳನ್ನಷ್ಟೇ ಪರೀಕ್ಷಿಸಲಾಗಿದೆ.

ಓದಿ:‘ಲಸಿಕೆ ಮೈತ್ರಿ’ ಕಾರ್ಯಕ್ರಮದ ಅಡಿಯಲ್ಲಿ ಲಸಿಕೆ ರಫ್ತು ಆರಂಭಿಸಲಿದೆ ಭಾರತ

ಬೆಂಗಳೂರಿನಲ್ಲಿ ಹೊಸದಾಗಿ213 ಜನರಿಗೆ ಸೋಂಕು ತಗುಲಿದೆ. ಕೇರಳ ಗಡಿ ಜಿಲ್ಲೆಗಳ ಪೈಕಿ ದಕ್ಷಿಣ ಕನ್ನಡದಲ್ಲಿ 102 ಪ್ರಕರಣಗಳು ವರದಿಯಾಗಿವೆ. ಕೊಡಗು ಹಾಗೂ ಮೈಸೂರಿನಲ್ಲಿ ಕ್ರಮವಾಗಿ29 ಮತ್ತು 37 ಪ್ರಕರಣಗಳು ದಾಖಲಾಗಿವೆ. ಉಡುಪಿ (63), ಉತ್ತರ ಕನ್ನಡ (41), ಹಾಸನ (37) ಮತ್ತು ಚಿಕ್ಕಮಗಳೂರಿನಲ್ಲಿ (35) ಅಧಿಕ ಪ್ರಕರಣಗಳು ದೃಢಪಟ್ಟಿವೆ. ಎಂಟು ಜಿಲ್ಲೆಗಳಲ್ಲಿ ಹೊಸ ಪ್ರಕರಣಗಳು ದಾಖಲಾಗಿಲ್ಲ. 11 ಜಿಲ್ಲೆಗಳಲ್ಲಿ ಇದು ಒಂದಂಕಿಗೆ ಇಳಿದಿದೆ.

ಕೋವಿಡ್ ಪೀಡಿತರ ಪೈಕಿ ಬೆಂಗಳೂರಿನಲ್ಲಿ 7 ಮಂದಿ ಮೃತಪಟ್ಟಿದ್ದಾರೆ. ಬೆಳಗಾವಿ ಮತ್ತು ಉಡುಪಿಯಲ್ಲಿ ತಲಾ ನಾಲ್ಕು ಜನ, ಹಾಸನದಲ್ಲಿ ಮೂವರು, ದಕ್ಷಿಣ ಕನ್ನಡದಲ್ಲಿ ಇಬ್ಬರು, ಬೆಂಗಳೂರು ಗ್ರಾಮಾಂತರ, ಚಿತ್ರದುರ್ಗ, ಧಾರವಾಡ ಮತ್ತು ಕೋಲಾರದಲ್ಲಿ ತಲಾ ಒಬ್ಬರು ಸಾವಿಗೀಡಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.