ನವದೆಹಲಿ: ಕರ್ನಾಟಕದ ಐದು ವಿದ್ಯುತ್ ಸರಬರಾಜು ಕಂಪನಿಗಳು (ಎಸ್ಕಾಂ) 2025ನೇ ಆರ್ಥಿಕ ವರ್ಷದಲ್ಲಿ ₹34,980 ಕೋಟಿ ನಷ್ಟದಲ್ಲಿವೆ. ಜತೆಗೆ, ₹47,993 ಕೋಟಿ ಸಾಲದ ಹೊರೆಯನ್ನೂ ಹೊತ್ತಿವೆ.

ಕೇಂದ್ರ ಇಂಧನ ಸಚಿವಾಲಯವು ಇತ್ತೀಚೆಗೆ ಬಿಡುಗಡೆ ಮಾಡಿರುವ ವಿದ್ಯುತ್ ಸರಬರಾಜು ಕಂಪನಿಗಳ ವಾರ್ಷಿಕ ಕಾರ್ಯಕ್ಷಮತೆ ವರದಿಯಲ್ಲಿ ಈ ಬಗ್ಗೆ ಉಲ್ಲೇಖ ಇದೆ. ತಮಿಳುನಾಡಿನ ಎಸ್ಕಾಂಗಳು (₹1.19 ಲಕ್ಷ ಕೋಟಿ) ಅತ್ಯಧಿಕ ನಷ್ಟ ಅನುಭವಿಸಿವೆ. ನಂತರದ ಸ್ಥಾನಗಳಲ್ಲಿ ಉತ್ತರ ಪ್ರದೇಶ, ರಾಜಸ್ಥಾನ, ತೆಲಂಗಾಣ, ಮಧ್ಯ ಪ್ರದೇಶ ಹಾಗೂ ಕರ್ನಾಟಕದ ಎಸ್ಕಾಂಗಳಿವೆ.

ಸಚಿವಾಲಯವು ದೇಶದ 54 ಕಂಪನಿಗಳ ಕಾರ್ಯಕ್ಷಮತೆ ಮೌಲ್ಯಮಾಪನ ಮಾಡಿದೆ. ಶ್ರೇಯಾಂಕದಲ್ಲಿ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿಯು (ಬೆಸ್ಕಾಂ) ರೆಡ್ ಕಾರ್ಡ್ ಪಡೆದು 51ನೇ ಸ್ಥಾನದಲ್ಲಿದೆ. ರಾಜ್ಯದ ಯಾವುದೇ ಕಂಪನಿಯು ಅಗ್ರ 10ರಲ್ಲಿ ಸ್ಥಾನ ಪಡೆದಿಲ್ಲ.

ವಿತರಣಾ ಜಾಲದಲ್ಲಿನ ಸೋರಿಕೆ, ಕಂಪನಿಯ ನಷ್ಟಗಳು ಹಾಗೂ ಸಾಲಗಳು ಬಿಲ್ಲಿಂಗ್ ದಕ್ಷತೆ, ಆಡಿಟ್ ಖಾತೆಗಳ ಲಭ್ಯತೆ, ಲೆಕ್ಕಪರಿಶೋಧಕರ ಅಭಿಪ್ರಾಯ ಸೇರಿದಂತೆ 15 ಅಂಶಗಳನ್ನು ಪರಿಶೀಲಿಸಿ ಸಚಿವಾಲಯವು ಕಂಪನಿಗಳಿಗೆ ಶ್ರೇಯಾಂಕ ನೀಡುತ್ತಿದೆ. 2024ಕ್ಕೆ ಹೋಲಿಸಿದರೆ 2025ರಲ್ಲಿ ರಾಜ್ಯದ ಎಸ್ಕಾಂಗಳ ಶ್ರೇಯಾಂಕ ಕುಸಿದಿದೆ. ಇನ್ನೊಂದೆಡೆ, ನಷ್ಟವೂ ಜಾಸ್ತಿ ಆಗಿದೆ ಹಾಗೂ ಸಾಲ ಪ್ರಮಾಣವೂ ಗಣನೀಯವಾಗಿ ಏರಿಕೆ ಆಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.