ಬೆಂಗಳೂರು: ರಾಜ್ಯ ಸರ್ಕಾರ ಪ್ರಾರಂಭಿಸುತ್ತಿರುವ ‘ನಮ್ಮ ಕ್ಲಿನಿಕ್’ಗಳಿಗೆ ಆರೋಗ್ಯ ಇಲಾಖೆಯುಲಾಂಛನಗಳನ್ನು (ಲೋಗೊ) ಆಹ್ವಾನಿಸಿದ್ದು, ‘ಆಯ್ಕೆಯಾದ ಲಾಂಛನದ ವಿನ್ಯಾಸಕಾರರಿಗೆ ಮುಖ್ಯಮಂತ್ರಿ ಮತ್ತು ಸಚಿವರಿಂದ ವಿಶೇಷ ಗೌರವ ಸಿಗಲಿದೆ’ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.

ಈ ಸ್ಪರ್ಧೆಗೆ ಶುಕ್ರವಾರ ಚಾಲನೆ ದೊರೆತಿದೆ. ಇದೇ 15ರವರೆಗೆ ಲಾಂಛನ ಕಳುಹಿಸಬಹುದು.ಸರ್ಕಾರವು ‘ನಮ್ಮ ಕ್ಲಿನಿಕ್’ಗಳಿಗೆ ವಿಶಿಷ್ಟವಾದ ಗುರುತನ್ನು ಎದುರು ನೋಡುತ್ತಿದೆ. ಸೃಜನಾತ್ಮಕ ಮತ್ತು ನವೀನ ಲಾಂಛನವನ್ನು ವಿನ್ಯಾಸ ಮಾಡಲು ರಾಜ್ಯದ ಜನರಿಗೆ ಅವಕಾಶವಿದೆ.ರಾಜ್ಯದ 436 ಕಡೆಗಳಲ್ಲಿ ನಮ್ಮ ಕ್ಲಿನಿಕ್‌ಗಳು ಆರಂಭವಾಗಲಿವೆ. ಇದು ರಾಜ್ಯದ ಆರೋಗ್ಯ ವ್ಯವಸ್ಥೆಗೆ ಹೊಸ ಸ್ಪರ್ಶವನ್ನು ತಂದು ಕೊಡಲಿದೆ ಎಂದು ಇಲಾಖೆ ಹೇಳಿದೆ.

ಸಿದ್ಧಪಡಿಸಿದ ಲಾಂಛನಗಳನ್ನು logo4nammaclinic@gmail.comಗೆ ಕಳುಹಿಸಬೇಕು ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.