PHOTOS | ರಾಜ್ಯದಲ್ಲಿ ಧಾರಾಕಾರ ಮಳೆ, ಜನಜೀವನ ಅಸ್ತವ್ಯಸ್ತ
ರಾಜ್ಯದ ಹಲವು ಭಾಗಗಳಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ. ಇದರಿಂದಾಗಿ ಅಪಾರ ನಾಶನಷ್ಟ ಸಂಭವಿಸಿದೆ. ಹಲವು ಕಡೆಗಳಲ್ಲಿ ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿದ್ದು, ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ.
ಬೆಳಗಾವಿ: ವೇದಗಂಗಾ ನದಿ ಉಕ್ಕಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ಪುಣೆ -ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯನ್ನು ನಿಪ್ಪಾಣಿ ತಾಲ್ಲೂಕಿನ ಯಮಗರಣಿ ಬಳಿ ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ.
ADVERTISEMENT
ಕಾರವಾರ: ಗಂಗಾವಳಿ ನದಿಯ ಪ್ರವಾಹಕ್ಕೆ ಸಿಲುಕಿದ ವಾಹನಗಳನ್ನು ತೆರವು ಮಾಡುತ್ತಿರುವುದು
ಅಂಕೋಲಾದಲ್ಲಿ ಗಂಗಾವಳಿ ನದಿಯ ಪ್ರವಾಹ
ಸಿದ್ದಾಪುರದ ಕಾನಸೂರಿನ ಶೇಡಿ ದಂಟಕಲ್‌ನಲ್ಲಿ ತೋಟ ಜಲಾವೃತ
ಬೆಳಗಾವಿ: ಜನರನ್ನು ಸ್ಥಳಾಂತರಿಸಲು ಪುರಸಭೆ ಅಧಿಕಾರಿಗಳು ಹಾಗೂ ಪೊಲೀಸರು ಗುರುವಾರ ರಾತ್ರಿಯಿಂದ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಧಾರವಾಡ: ಜಿಲ್ಲೆಯಲ್ಲಿ ಮಳೆ ಆರ್ಭಟ ಹೆಚ್ಚಾಗಿದ್ದು, ಕಲಘಟಗಿಯ ಅರ್ಬಾಳ ಗುಡ್ಡ ಕುಸಿದಿದೆ.
ಶಿರಸಿ: ತಾಲ್ಲೂಕಿನ ಬನದಗೋಡ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ರಂಗಾಪುರದ ಕುಂಬಾರಕಟ್ಟೆ ಕೆರೆ ನಿರಂತರ ಮಳೆಯಿಂದ ಭರ್ತಿಯಾಗಿದೆ.
ಕಾರವಾರ/ ಯಲ್ಲಾಪುರ: ಕಾರು ಕೊಚ್ಚಿಹೋಗದಂತೆ ಹಗ್ಗ ಹಾಕಿ ಕಟ್ಟಿ ಇಟ್ಟಿದ್ದರು.
ಕಾರವಾರ ತಾಲ್ಲೂಕಿನ ಮಲ್ಲಾಪುರ ಟೌನ್‌ಶಿಪ್ ಪ್ರದೇಶ ಜಲಾವೃತವಾಗಿದೆ
ರಬಕವಿ-ಬನಹಟ್ಟಿ ತಾಲ್ಲೂಕಿನ ಹಿಪ್ಪರಗಿ ಬಳಿ ಕೃಷ್ಣಾ ನದಿಯಲ್ಲಿ ನೀರಿನ ಮಟ್ಟ ಶುಕ್ರವಾರ ಹೆಚ್ಚಳಗೊಂಡಿದೆ
ಅಘನಾಶಿನಿ ಉಕ್ಕಿದ ಪರಿಣಾಮ ಶಿರಸಿ ತಾಲ್ಲೂಕಿನ ಸರಕುಳಿ ಗ್ರಾಮ ಜಲಾವೃತವಾಗಿದೆ. ನದಿ ಪಕ್ಕದ ಮಹಿಷಾಸುರ ಮರ್ದಿನಿ ದೇವಸ್ಥಾನ ಮುಳುಗಿದೆ.
ಚಿಕ್ಕಮಗಳೂರು: ಮಳೆ ಗಾಳಿಗೆ ಕಳಸದಲ್ಲಿ ಮನೆಯೊಂದು ಕುಸಿದಿದೆ.
ಎನ್.ಆರ್.ಪುರ ತಾಲ್ಲೂಕಿನ ದಾವಣ ಗ್ರಾಮದಲ್ಲಿ ಮನೆಯೊಂದರ ಮೇಲೆ ಮರ ಉರುಳಿ ಹಾನಿಯಾಗಿದೆ.
ಸತತ ಮಳೆಯಿಂದಾಗಿ ಹಾವೇರಿ ಜಿಲ್ಲೆ ಹಾನಗಲ್ ತಾಲ್ಲೂಕಿನ ಹೆರೂರ ಗ್ರಾಮದಲ್ಲಿ ತುಂಬಿ ಹರಿಯುತ್ತಿರುವ ಕೆರೆ ಕಟ್ಟೆಗಳು ಹಾಗೂ ಕೃಷಿ ಜಮೀನುಗಳಿಗೆ ನೀರು ನುಗ್ಗಿ ಅಪಾರ ಬೆಳೆ ಹಾನಿಯಾಗಿದೆ.