ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸ್‌ನಿಂದ ಬಿದ್ದು ಯುವತಿ ಸಾವು: ಸುರಕ್ಷತಾ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ KSRTC

Published 14 ಜೂನ್ 2023, 10:32 IST
Last Updated 14 ಜೂನ್ 2023, 10:32 IST
ಅಕ್ಷರ ಗಾತ್ರ

ಬೆಂಗಳೂರು: ಪ್ರಯಾಣಿಕರ ಸುರಕ್ಷತೆಗೆ ಆದ್ಯತೆ ನೀಡಬೇಕು ಮತ್ತು ವಾಹನದ ಬಾಗಿಲುಗಳು ಸುಸ್ಥಿತಿಯಲ್ಲಿರುವ ಬಗ್ಗೆ ಖಾತ್ರಿ ಪಡಿಸಿಕೊಳ್ಳಬೇಕು ಎಂದು ಕೆಎಸ್‌ಆರ್‌ಟಿಸಿ ಸಿಬ್ಬಂದಿ ಮತ್ತು ಜಾಗೃತ ನಿರ್ದೇಶಕರು ಸೂಚನೆಗಳನ್ನು ನೀಡಿದ್ದಾರೆ.

ಹಾವೇರಿ ವಿಭಾಗದ ಹಾನಗಲ್‌ ಘಟಕಕ್ಕೆ ಸೇರಿದ ಬಸ್‌ನಿಂದ ಬಿದ್ದು ವಿದ್ಯಾರ್ಥಿನಿಯೊಬ್ಬರು ಸಾವಿಗೀಡಾಗಿದ್ದರಿಂದ ಈ ನಿರ್ದೇಶನಗಳನ್ನು ನೀಡಲಾಗಿದೆ.

ಸಿಬ್ಬಂದಿಗಳಿಗೆ KSRTC ನೀಡಿದ ಸೂಚನೆಗಳು ಹೀಗಿವೆ:

  • ಸಾರಿಗೆ ಬಸ್‌ಗಳಲ್ಲಿ ಈ ರೀತಿಯ ಘಟನೆಗಳು ನಡೆಯದಂತೆ ಚಾಲಕರು ಬಸ್‌ಗಳನ್ನು ಘಟಕದಿಂದ ಕಾರ್ಯಾಚರಣೆಗೆ ತೆಗೆದುಕೊಂಡು ಹೋಗುವ ಮೊದಲು ವಾಹನದ ಬಾಗಿಲುಗಳು ಪರಿಶೀಲಿಸಬೇಕು.

  • ಬಸ್‌ ನಿಲ್ದಾಣಗಳಲ್ಲಿ ನಿರ್ವಾಹಕರು ಬಸ್‌ನ ಹಿಂಬಾಗಿಲು ಮುಚ್ಚಿರುವ ಬಗ್ಗೆ ತಿಳಿದುಕೊಂಡು ಚಾಲಕರಿಗೆ ವಾಹನ ಚಲಾಯಿಸುವಂತೆ ಸೂಚನೆ ನೀಡಬೇಕು.

  • ಬಸ್‌ನ ಫುಟ್‌ಬೋರ್ಡ್‌ನಲ್ಲಿ ಪ್ರಯಾಣಿಕರು ನಿಂತುಕೊಳ್ಳಲು ಅವಕಾಶ ನೀಡಬಾರದು.

  • ಚಾಲಕರು ಬಸ್‌ನ ಹಿಂದಿನ ಮತ್ತು ಮುಂದಿನ ಬಾಗಿಲು ಮುಚ್ಚಿರುವ ಬಗ್ಗೆ ಖಾತ್ರಿಪಡಿಸಿಕೊಂಡು ವಾಹನ ಚಾಲನೆ ಮಾಡಬೇಕು.

  • ಬಸ್‌ ನಿಲ್ದಾಣ ತಲುಪುವ ಮುಂಚೆ ವಾಹನದ ಬಾಗಿಲು ತೆರೆಯದೆ, ಬಸ್‌ ನಿಲುಗಡೆಯ ನಂತರ ಬಾಗಿಲುಗಳನ್ನು ತೆರೆಯಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT