ಸುಬ್ರಹ್ಮಣ್ಯ: ಭಾರತ ಕ್ರಿಕೆಟ್ ತಂಡದ ಖ್ಯಾತ ಆಟಗಾರ ಹಾಗೂ ಕರ್ನಾಟಕ ಏಕದಿನ ತಂಡದ ನಾಯಕ ಮನೀಶ್ ಪಾಂಡೆ ದಂಪತಿ ಕಡಬ ತಾಲ್ಲೂಕಿನ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.

ಮನೀಷ್ ಪಾಂಡೆ ತಮ್ಮ ಪತ್ನಿ ಆಶ್ರಿತಾ ಶೆಟ್ಟಿ ಜೊತೆ ನಾಗರಾಧನಾ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಶನಿವಾರ ಭೇಟಿ ನೀಡಿ ಶ್ರೀ ದೇವರ ದರ್ಶನ ಪಡೆದರು.

ಡಿಸೆಂಬರ್ ತಿಂಗಳಿನಲ್ಲಿ ಮನೀಶ್ ಪಾಂಡೆ ತುಳುನಾಡಿನ ಬೆಡಗಿ, ತಮಿಳು ಹಾಗೂ ತುಳು ನಟಿ ಆಶ್ರಿತಾ ಶೆಟ್ಟಿ ಜೊತೆ ಮುಂಬಯಿಯಲ್ಲಿ ವಿವಾಹವಾಗಿದ್ದರು.

ವಿವಾಹದ ಬಳಿಕ ಮೊದಲ ಬಾರಿಗೆ ಶುಕ್ರವಾರ ಕುಕ್ಕೆ ಸುಬ್ರಹಣ್ಯಕ್ಕೆ ತಮ್ಮ ಗೆಳೆಯನ ಜೊತೆ ಆಗಮಿಸಿದ ದಂಪತಿ ಇಲ್ಲಿನ ಖಾಸಗಿ ವಸತಿಗೃಹದಲ್ಲಿ ತಂಗಿದ್ದರು.

ಶನಿವಾರ ಬೆಳಿಗ್ಗೆ ದಂಪತಿ ದೇವಸ್ಥಾನಕ್ಕೆ ಭೇಟಿ ನೀಡಿ, ಆಶ್ಲೇಷ ಪೂಜಾ ಸೇವೆ ನೆರೆವೇರಿಸಿದರು. ಬಳಿಕ ಆದಿ ಸುಬ್ರಹ್ಮಣ್ಯಕ್ಕೆ ತೆರಳಿ ದೇವರ ದರ್ಶನ ಪಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.