ಬೆಂಗಳೂರು: ‘ವಿಧಾನಸಭೆ ಸಚಿವಾಲಯದ ಕಾರ್ಯದರ್ಶಿ (ಪ್ರಭಾರ) ಎಂ.ಕೆ. ವಿಶಾಲಾಕ್ಷಿ ಅವರು ಹೈಕೋರ್ಟ್‌ಗೆ ಆ. 27ರಂದು ಸಲ್ಲಿಸಿರುವ ಅರ್ಜಿ ಮತ್ತು ಪ್ರಮಾಣ ಪತ್ರದಲ್ಲಿ ತಪ್ಪು ಮಾಹಿತಿ ನೀಡಿದ್ದಾರೆ’ ಎಂದು ಅಮಾನತಿನಲ್ಲಿರುವ ವಿಧಾನಸಭೆ ಸಚಿವಾಲಯ ಕಾರ್ಯದರ್ಶಿ ಎಸ್. ಮೂರ್ತಿ ಅವರುಸಭಾಧ್ಯಕ್ಷರಿಗೆ ಪತ್ರ ಬರೆದಿದ್ದಾರೆ.

’ನನ್ನ ಮರು ನೇಮಕಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಏಕ ಸದಸ್ಯ ಪೀಠ ನೀಡಿದ್ದ ತೀರ್ಪಿನ ವಿರುದ್ಧ ವಿಧಾನಸಭೆ ಸಚಿವಾಲಯವು ಮೇಲ್ಮನವಿ ಸಲ್ಲಿಸಿತ್ತು. ಸಚಿವಾಲಯದ ಪರವಾಗಿ ಅಡ್ವೊಕೇಟ್ ಜನರಲ್ ಅವರು, 2021ರ ಮೇ ತಿಂಗಳ ಒಳಗೆ ಇಲಾಖಾ ವಿಚಾರಣೆ ನಡೆಸುತ್ತೇವೆಂದು ನೀಡಿದ್ದ ಹೇಳಿಕೆಯನ್ನು ದ್ವಿ ಸದಸ್ಯ ಪೀಠ ದಾಖಲಿಸಿಕೊಂಡಿತ್ತು. ಆದರೆ, ಸಚಿವಾಲಯ ನನ್ನ ಇಲಾಖಾ ವಿಚಾರಣೆ ಮುಗಿಸಿಲ್ಲ’.

‘ದ್ವಿ ಸದಸ್ಯ ಪೀಠದ ಈ ತೀರ್ಪು ಮರೆ ಮಾಚಿ ವಿಶಾಲಾಕ್ಷಿ ಅವರು ಏಕ ಸದಸ್ಯ ಪೀಠದ ಮತ್ತೊಂದು ದಾವೆಯಲ್ಲಿ ಹೊಸ ಅರ್ಜಿ ಮತ್ತು ಪ್ರಮಾಣ ಪತ್ರ ಸಲ್ಲಿಸಿದ್ದು, ಅದರಲ್ಲಿ ಇದೇ ಸೆ. 27ರ ಒಳಗೆ ಇಲಾಖಾ ವಿಚಾರಣೆ ಮುಗಿಸುವುದಾಗಿ ಪೀಠದಿಂದ ಆದೇಶ ಪಡೆದುಕೊಂಡಿದ್ದಾರೆ. ಈ ಹೊಸ ಆದೇಶವನ್ನು ಸಭಾಧ್ಯಕ್ಷರ ಗಮನಕ್ಕೂ ತಂದು, ಸೆ. 27ರ ಒಳಗೆ ಇಲಾಖಾ ವಿಚಾರಣೆ ಮುಗಿಸಲು ಜುಲೈ 31ರಂದು ಆದೇಶ ಹೊರಡಿಸಿದ್ದಾರೆ. ವಿಶಾಲಕ್ಷಿ ಅವರು ತಪ್ಪು ಮಾಹಿತಿ ನೀಡಿದ್ದರಿಂದ ಏಕದಸ್ಯ ಪೀಠ ಮತ್ತು ದ್ವಿ ಸದಸ್ಯ ಪೀಠ ಬೇರೆ ಬೇರೆ ತೀರ್ಪು ನೀಡಿದೆ. ಎರಡನೇ ಬಾರಿ ಇಲಾಖಾ ವಿಚಾರಣೆಗೆ ಹೊರಡಿಸಿದ ಆದೇಶ ಕಾನೂನು ಬಾಹಿರ’ ಎಂದು ಪತ್ರದಲ್ಲಿ ಮೂರ್ತಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.