ರಾಜ್ಯದಲ್ಲಿ ಈಗ 30 ಸಾವಿರಕ್ಕೂ ಹೆಚ್ಚು ಒಎಫ್ಸಿ ಮತ್ತು ದೂರ ಸಂಪರ್ಕ ಟವರ್ಗಳಿವೆ. ಬೆಂಗಳೂರು ಒಂದರಲ್ಲೇ 6766 ಟವರ್ಗಳಿವೆ. ಇನ್ನು ಮುಂದೆ ಹೊಸದಾಗಿ ಟವರ್ ಹಾಕಬೇಕಿದ್ದರೆ ಮಹಾನಗರಗಳಲ್ಲಿ ಶಾಲಾ– ಕಾಲೇಜು, ಆಸ್ಪತ್ರೆ, ಧಾರ್ಮಿಕ ಸಂಸ್ಥೆಗಳಿಂದ ಕನಿಷ್ಠ 50 ಮೀಟರ್ ಅಂತರದಲ್ಲಿ ಟವರ್ ಅಳವಡಿಕೆ ಮಾಡಬೇಕು. ಈಗಾಗಲೇ 50 ಮೀಟರ್ ಒಳಗೆ ಇದ್ದರೆ ಅದನ್ನು ತೆರವುಗೊಳಿಸಿ ಬೇರೆ ಕಡೆಗಳಲ್ಲಿ ಹಾಕಬೇಕು ಎಂದು ಹೇಳಿದರು.