‘ವಿಧಾನ ಪರಿಷತ್ತು ಹಿರಿಯರ ಚಾವಡಿ, ಬುದ್ಧವಂತರ ವೇದಿಕೆ. ಆ ವೇದಿಕೆಯಲ್ಲಿ ಬಹಳಷ್ಟು ಪ್ರಬುದ್ಧವಾಗಿ ಮಾತನಾಡಬೇಕು. ಅಂಥಲ್ಲೇ ಆ ಮಾತು ಹೇಳಿದ್ದಾರೆ. ಕೇಳಿದ ಕೆಲವರು ನನ್ನ ಬಳಿ ಬಂದು ಸಾರಿ ಅವರು ಹಾಗೆ ಅನ್ನಬಾರದಿತ್ತು ಎನ್ನುತ್ತಾರೆ. ಆದರೆ, ಒಬ್ಬರೂ ನೇರವಾಗಿ ಸಿ.ಟಿ. ರವಿ ಅವರು ಆಡಿದ ಮಾತನ್ನು ಖಂಡಿಸಲಿಲ್ಲ. ಎಲ್ಲರೂ ಧೃತರಾಷ್ಟ್ರನಂತಿದ್ದರು ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಶುಕ್ರವಾರ ಬೆಳಗಾವಿಯಲ್ಲಿ ನೋವಿನಿಂದ ಹೇಳಿದರು.