ಒಟ್ಟು 1,29,417 ಸೀಟುಗಳಲ್ಲಿ 1,12,677 ಸೀಟುಗಳು ಹಂಚಿಕೆಯಾಗಿವೆ. ಎಂಜಿನಿಯರಿಂಗ್ ಕೋರ್ಸ್‌ಗಳಿಗೆ 73,847 ಸೀಟು ಹಂಚಿಕೆಯಾಗಿದ್ದು, 3,126 ಸೀಟು ಉಳಿದಿವೆ. ವೈದ್ಯಕೀಯ ಕೋರ್ಸ್ ಪ್ರವೇಶಕ್ಕೆ 8,798 ಸೀಟು ಹಂಚಿಕೆಯಾಗಿದ್ದು, 383 ಆಡಳಿತ ಮಂಡಳಿ ಸೀಟುಗಳು ಮಾತ್ರ ಹಂಚಿಕೆಗೆ ಬಾಕಿ ಇವೆ. ನರ್ಸಿಂಗ್ ಕೋರ್ಸ್‌ಗಳಲ್ಲಿ 14,448 ಸೀಟು ಹಂಚಿಕೆಯಾಗಿ, 10,194 ಸೀಟು ಬಾಕಿ ಉಳಿದಿವೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಹೇಳಿದೆ.