ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಕಳೆದ ವರ್ಷ ಸಂಭವಿಸಿದ ಭೂಕುಸಿತ ಹಾಗೂ ಪ್ರವಾಹದಿಂದ ಮನೆ ಕಳೆದುಕೊಂಡಿದ್ದವರ ಪೈಕಿ ಮೊದಲ ಹಂತದಲ್ಲಿ 35 ಫಲಾನುಭವಿಗಳಿಗೆ ಜಿಲ್ಲಾಡಳಿತ ಮನೆ ಹಂಚಿಕೆ ಮಾಡಿದೆ.

ಸಂತ್ರಸ್ತರ ಮೊದಲ ಪಟ್ಟಿಯಲ್ಲಿ ಪೂರ್ಣ ಹಾಗೂ ತೀವ್ರ ಹಾನಿಗೊಳಗಾದ ನಿರಾಶ್ರಿತರಿಗೆ ಸರ್ಕಾರದ ವತಿಯಿಂದ ಕರ್ಣಂಗೇರಿ ಗ್ರಾಮದ ಸರ್ವೆ ನಂಬರ್ 178/1ರಲ್ಲಿ 4.80 ಎಕರೆ ಜಾಗದಲ್ಲಿ ನಿರ್ಮಿಸಿರುವ 35 ಮನೆಗಳನ್ನು ಕರ್ಣಂಗೇರಿಯಲ್ಲಿಯೇ ತಮಗೆ ಮನೆಗಳು ಬೇಕೆಂದು ಕೋರಿದ್ದ ಸಂತ್ರಸ್ತರಿಗೆ ಹಂಚಿಕೆ ಮಾಡಲಾಗಿದೆ ಎಂದು ಉಪ ವಿಭಾಗಾಧಿಕಾರಿ ಟಿ.ಜವರೇಗೌಡ ತಿಳಿಸಿದರು.

ಅನುಮೋದಿತ ಬಡಾವಣೆ ನಕ್ಷೆಯಂತೆ 35 ಮನೆಗಳನ್ನು ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮದ ವತಿಯಿಂದ ನಿರ್ಮಿಸಲಾಗಿದೆ. ಕರ್ಣಂಗೇರಿಯಲ್ಲಿಯೇ ಮನೆಬೇಕೆಂದು 106 ಸಂತ್ರಸ್ತರು ಮನವಿ ಸಲ್ಲಿಸಿದ್ದರು.

ಕರ್ಣಂಗೇರಿ ಗ್ರಾಮದ 3 ಮಂದಿ ಮನೆ ಕಳೆದುಕೊಂಡಿದ್ದು ಅವರಿಗೆ ಕರ್ಣಂಗೇರಿಯಲ್ಲೇ ಮನೆ ವಿತರಣೆ ಮಾಡಲಾಗಿದೆ. ಮಕ್ಕಂದೂರು ಗ್ರಾಮದ ಉದಯಗಿರಿ ಭಾಗದಲ್ಲಿ ಬರುವ ಸಂತ್ರಸ್ತರಿಗೆ ಮನೆ ನಿರ್ಮಾಣ ಮಾಡಲಾಗುತ್ತಿರುವ ಸ್ಥಳಕ್ಕೆ ಕೇವಲ 2 ಕಿ.ಮೀ ದೂರವಿದೆ. ಹೀಗಾಗಿ ಅಲ್ಲಿನ 16 ಸಂತ್ರಸ್ತರಿಗೂ ಅಲ್ಲಿಯೇ ಮನೆ ಹಂಚಿಕೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಕರ್ಣಂಗೇರಿಯಲ್ಲಿ ಮನೆ ಕೋರಿರುವ ಎಲ್ಲ ಸಂತ್ರಸ್ತರನ್ನು ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಭೆಗೆ ಏರ್ಪಡಿಸಿ ಉಳಿದ 16 ಮನೆಗಳನ್ನು ಅವರ ಸಮ್ಮುಖದಲ್ಲೇ ಲಾಟರಿ ಮೂಲಕ ಆಯ್ಕೆ ಮಾಡಲಾಗಿದೆ ಎಂದು ತೀಳಿಸಿದರು.

ಕರ್ಣಂಗೇರಿ– ಉದಯಗಿರಿ ಭಾಗದ ಫಲಾನುಭವಿಗಳು: ಕರ್ಣಂಗೇರಿಯ ಪ್ರಿಯಾ ವಿಜಯ್ ಕುಮಾರ್ (ವಿಜಯ್ ಕುಮಾರ್), ಗೌರಮ್ಮ ಎಚ್.ಜಿ. (ಭರತ್), ಅಕ್ಕಮ್ಮ ಬಿ.ಎಂ. (ಮುತ್ತಪ್ಪ), ಉದಯಗಿರಿಯ ಬಿ.ಎಸ್. ಸಂಜೀವ್ ರೈ (ರಾಮಣ್ಣ), ಬಿ.ಕೆ. ಚಂದ್ರಶೇಖರ್ (ಬಿ. ಕುಟ್ಟಿ ಪೂಜಾರಿ), ಬಿ.ಡಿ.ಪಾರ್ವತಿ (ಧರ್ಮಪ್ಪ), ಪಿ. ಜಯರಾಂ (ಪರಮೇಶ್ವರ), ಜಯಂತಿ ಒ.ಬಿ. (ಒ.ಕೆ. ಬಾಬು), ಒ.ಕೆ.ಜಾರಪ್ಪ (ಕೊರಗಪ್ಪ), ಶ್ರೀಲತಾ (ಮುತ್ತಪ್ಪ), ಎಂ.ಆರ್.ದೇವಕ್ಕಿ (ರಾಮಣ್ಣ), ಎಂ.ಎ.ರಾಮಣ್ಣ ನಾಯ್ಕ (ಅಣ್ಣು ನಾಯ್ಕ), ಗಣೇಶ್ ಬಿ.ಐ.(ಐತಪ್ಪ), ಎಚ್.ಕೆ.ಮನುಕುಮಾರ್ (ಎಚ್.ಆರ್. ಕಾಂತಪ್ಪ), ಬಿ.ಎಸ್.ಪದ್ಮಾವತಿ (ಕೃಷ್ಣಪ್ಪ), ಎಚ್.ಬಿ.ಗಿರಿಜಾ (ಬಾಬು), ಎಂ.ಎ.ರಾಮಚಂದ್ರ (ಅಣ್ಣು ನಾಯ್ಕ), ಬಿ.ಕೆ.ವಿಠಲ (ಕುಟ್ಟಿ ಪೂಜಾರಿ), ಬಿ.ಎ.ಸುಂದರ (ಯಲ್ಯಣ್ಣ ಪೂಜಾರಿ).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.