ಬೆಂಗಳೂರು: 13 ಶಾಸಕರು ಸ್ವ ಇಚ್ಛೆಯಿಂದಲೇ ಬಂದು ರಾಜೀನಾಮೆ ನೀಡಿರುವುದರಿಂದ ಅಂಗೀಕರಿಸಲು ಕೆಲವು ದಿನ ವಿಳಂಬ ಮಾಡಬಹುದೇ ವಿನಃ ಅದನ್ನು ತಿರಸ್ಕರಿಸಲು ಅವಕಾಶವಿಲ್ಲ.

ಒಂದು ವೇಳೆ ರಾಜೀನಾಮೆ ಪತ್ರದಲ್ಲಿ ಸಣ್ಣ ಪುಟ್ಟ ತಾಂತ್ರಿಕ ತಪ್ಪುಗಳಿದ್ದರೆ ಅದನ್ನು ಸರಿಪಡಿಸಲು ರಾಜೀನಾಮೆ ಕೊಟ್ಟ ಶಾಸಕರಿಗೆ ಅವಕಾಶ ಇರುತ್ತದೆ. ಒಂದು ವೇಳೆ ರಾಜೀನಾಮೆ ನೀಡಿದವರು ಮನಸ್ಸು ಬದಲಿಸಿ ರಾಜೀನಾಮೆ ಪತ್ರ ಹಿಂದಕ್ಕೆ ಪಡೆಯಲು ಬಯಸಿದರೆ, ಅದಕ್ಕೂ ಸಭಾಧ್ಯಕ್ಷರು ಅವಕಾಶ ನೀಡಬಹುದುಎಂದು ಸಚಿವಾಲಯದ ಉನ್ನತ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ಶಾಸಕ ಸ್ಥಾನಕ್ಕೆ ಸ್ವಯಂ ಇಚ್ಛೆಯಿಂದ ರಾಜೀನಾಮೆ ಕೊಟ್ಟಿರುವುದು ಮತ್ತು ತಮ್ಮದು ದೃಢ ನಿರ್ಧಾರ ಎಂಬುದು ಸಭಾಧ್ಯಕ್ಷರಿಗೆ ಮನವರಿಕೆ ಆಗಬೇಕು. ಇವಿಷ್ಟು ಬಿಟ್ಟು ಬೇರೆ ಏನೂ ಮಾಡಲು ಆಗುವುದಿಲ್ಲ ಎಂದು ಮೂಲಗಳು ಹೇಳಿವೆ.

ಮಂಗಳವಾರ ಸಭಾಧ್ಯಕ್ಷರು ಬೆಂಗಳೂರಿಗೆ ಬರುವುದರಿಂದ ಆ ದಿನ ತಮ್ಮ ತೀರ್ಮಾನ ಪ್ರಕಟಿಸಬಹುದು. ಈ ಹಿಂದೆ ಡಾ.ಉಮೇಶ್ ಜಾಧವ್ ಅವರನ್ನು ಕರೆಸಿ ವಿಚಾರಣೆ ಮಾಡಿದ ರೀತಿಯಲ್ಲೇ 13 ಶಾಸಕರನ್ನು ಕರೆಸಿ, ರಾಜೀನಾಮೆ ನಿರ್ಧಾರದ ಬಗ್ಗೆ ಮಾಹಿತಿ ಪಡೆಯಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.