ಬೆಳಗಾವಿ (ಸುವರ್ಣ ವಿಧಾನಸೌಧ): ದಿವಂಗತ ಚಿತ್ರನಟ ಪುನೀತ್ ರಾಜ್‌ಕುಮಾರ್ ಅವರಿಗೆ ಮರಣೋತ್ತರವಾಗಿ ಘೋಷಿಸಿರುವ ಕರ್ನಾಟಕ ರತ್ನ ಪ್ರಶಸ್ತಿಯನ್ನು ಶೀಘ್ರದಲ್ಲೇ ಪ್ರದಾನ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ವಿಧಾನಸಭೆಯಲ್ಲಿ ಸೋಮವಾರ ಸಂತಾಪ ಸೂಚನಾ ಮಂಡನಾ ನಿರ್ಣಯದ ಮೇಲೆ ಮಾತನಾಡಿದ ಅವರು, ’ಚಿಕ್ಕವಯಸ್ಸಿನಲ್ಲೇ ಎಲ್ಲ ಕ್ಷೇತ್ರದಲ್ಲೂ ಅತ್ಯದ್ಭುತವಾದದ್ದನ್ನು ಸಾಧಿಸಿದ ಪುನೀತ್ ಅವರಿಗೆ ಪ್ರಶಸ್ತಿಯನ್ನು ಈಗಾಗಲೇ ಘೋಷಿಸಲಾಗಿದೆ. ಪ್ರಶಸ್ತಿ ದಿನಾಂಕವನ್ನು ಸದ್ಯವೇ ನಿರ್ಣಯ ಮಾಡಲಾಗುವುದು‘ ಎಂದು ಹೇಳಿದರು.

ಅವರಿಗೆ ಪದ್ಮಶ್ರೀ ಪ್ರಶಸ್ತಿಯನ್ನು ನೀಡುವಂತೆ ರಾಜ್ಯ ಸರ್ಕಾರ ಕೇಂದ್ರಕ್ಕೆ ಶಿಫಾರಸು ಮಾಡಲಿದೆ ಎಂದೂ ಅವರು ಹೇಳಿದರು.

ಪದ್ಮಶ್ರೀ ಕೊಡಲು ಕೇಂದ್ರಕ್ಕೆ ಶಿಫಾರಸು ಮಾಡಬೇಕೆಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕ ಬಂಡೆಪ್ಪ ಕಾಶೆಂಪೂರ ಆಗ್ರಹಪೂರ್ವಕವಾಗಿ ಪ್ರತಿಪಾದಿಸಿದರು.

ಮಾಮಾ ಎನ್ನುತ್ತಿದ್ದ ಪುನೀತ್: ರಾಜ್ ಕುಮಾರ್ ಕುಟುಂಬದ ಜತೆಗಿನ ಒಡನಾಟವನ್ನು ಇದೇ ವೇಳೆ ಸ್ಮರಿಸಿದ ಸಿದ್ದರಾಮಯ್ಯ, ’ಚಾಮರಾಜನಗರದ ಭಾಷೆಯಲ್ಲೇ ತಮ್ಮ ಜತೆ ಅವರು ಮಾತನಾಡುತ್ತಿದ್ದವರು. ನಮ್ಮ ಭಾಗದವರು ಎನ್ನುವುದನ್ನು ‘ನಮ್ಮ ಕಾಡಿನವರು’ ಎಂದು ರಾಜ್‌ಕುಮಾರ್ ನಮ್ಮ ಕಡೆಯ ಭಾಷೆಯಲ್ಲೇ ಹೇಳುತ್ತಿದ್ದರು. ಪುನೀತ್ ಕೂಡ ನನ್ನನ್ನು ಮಾಮಾ ಎನ್ನುತ್ತಿದ್ದ. ರಾಜಕುಮಾರ ಸಿನಿಮಾ ಬಿಡುಗಡೆಯಾದಾಗ ನೋಡಿ ಎಂದು ಕೇಳಿಕೊಂಡಿದ್ದ. ಚಿತ್ರಮಂದಿರಕ್ಕೆ ಹೋಗಿ ಸಿನಿಮಾ ನೋಡುವುದನ್ನೇ ದಶಕಗಳ ಕಾಲ ಬಿಟ್ಟಿದ್ದ ನಾನು ಪುನೀತ್‌ಗಾಗಿ ಮೈಸೂರಿನ ಚಿತ್ರಮಂದಿರದಲ್ಲಿ ಸಿನಿಮಾ ನೋಡಿದ್ದೆ‘ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.