ಸರ್ಕಾರದ ವಾದವೇನು?
‘ರಸ್ತೆ ವಿಸ್ತರಣೆಗೆ 1994ರಲ್ಲಿ ಭೂಸ್ವಾಧೀನ ಮಾಡಲಾಗಿತ್ತು. ಆದರೆ, ಮೌಲ್ಯಮಾಪನವನ್ನು 2004ರ ದರದ ಪ್ರಕಾರ ಮಾಡಲಾಗುತ್ತಿದೆ. 15 ಎಕರೆ ಜಾಗಕ್ಕೆ ಟಿಡಿಆರ್ ನೀಡಲು ಅನುಮತಿಸಿದರೆ, 472 ಎಕರೆಗಳ ಸಂಪೂರ್ಣ ಸ್ವಾಧೀನಕ್ಕೆ ಟಿಡಿಆರ್ ಮೊತ್ತ ಒಂದು ಲಕ್ಷ ಕೋಟಿಗೂ ಹೆಚ್ಚು ಆಗಲಿದೆ. ಇದರಿಂದ, ರಾಜ್ಯದ ಖಜಾನೆಗೆ ಭಾರಿ ಹೊರೆ ಬೀಳಲಿದೆ’ ಎಂದು ರಾಜ್ಯ ಸರ್ಕಾರದ ವಕೀಲರು ವಾದಿಸಿದ್ದರು. ‘ರಾಜ್ಯ ಹೈಕೋರ್ಟ್‌ನಲ್ಲಿ ಸರ್ಕಾರದ ಪರವಾಗಿ ತೀರ್ಪು ಬಂದಿದೆ. ರಾಜ್ಯ ಸರ್ಕಾರದ ಮುಖ್ಯ ಮೇಲ್ಮನವಿ ಅರ್ಜಿಯನ್ನು ಪೀಠ ವಿಚಾರಣೆ ನಡೆಸಬೇಕು’ ಎಂದು ಕೋರಿದ್ದರು.