ಬೆಂಗಳೂರು: ಕಾಂಗ್ರೆಸ್ಗೆ ರಾಷ್ಟ್ರದ ಹಿತಾಸಕ್ತಿಗಿಂತ ರಾಜಕೀಯ ಹಿತಾಸಕ್ತಿಯೇ ಮುಖ್ಯ ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದ್ದಾರೆ.

ಇರಾನ್–ಇಸ್ರೇಲ್ ಯುದ್ಧದ ಸಂಬಂಧ ಭಾರತದ ನಿಲುವಿಗೆ ಕಾಂಗ್ರೆಸ್ ಮತ್ತು ವಿರೋಧಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿವೆ. ಭಾರತ ಒಂದು ರಾಷ್ಟ್ರವಾಗಿ ರಾಷ್ಟ್ರದ ಹಿತಾಸಕ್ತಿಯನ್ನು ಆಧರಿಸಿ ಸಾಂದರ್ಭಿಕ ನಿಲುವು ತೆಗೆದುಕೊಳ್ಳುತ್ತದೆ. ಆಲಿಪ್ತ ನೀತಿ ಎಂಬುದು ಒಂದು ಕಾಲದಲ್ಲಿ ಭಾರತ ತಾತ್ಕಾಲಿಕವಾಗಿ ಅಳವಡಿಸಿಕೊಂಡ ನೀತಿಯಾಗಿತ್ತು ಎಂದು ಅವರು ತಿಳಿಸಿದರು.

ರಾಷ್ಟ್ರದ ರಕ್ಷಣೆ ವಿಚಾರದಲ್ಲಿ ರಾಷ್ಟ್ರದ ಹಿತಾಸಕ್ತಿಯನ್ನು ಆಧರಿಸಿ ಕಾಲ ಕಾಲಕ್ಕೆ ಅಗತ್ಯ ಇರುವ ನಿಲುವನ್ನು ಭಾರತವು ತೆಗೆದುಕೊಳ್ಳುತ್ತದೆ. ಆದರೆ, ಕಾಂಗ್ರೆಸ್ಗೆ ರಾಜಕೀಯ ಹಿತಾಸಕ್ತಿಯೇ ಮುಖ್ಯವಾಗಿದೆ. ತಮ್ಮ ಮತ ಬ್ಯಾಂಕ್ ರಕ್ಷಿಸಿಕೊಳ್ಳಲು ಭಯೋತ್ಪಾದಕನಾದರೂ ಪರವಾಗಿಲ್ಲ. ಅವರ ಬಗ್ಗೆ ಕರುಣೆ ತೋರಿಸಬೇಕು ಎಂಬ ನಿಲುವು ಹೊಂದಿದೆ. ಬಿಜೆಪಿ ಆ ನಿಲುವು ಹೊಂದಿಲ್ಲ ಎಂದರು.

ರಾಷ್ಟ್ರದ ವಿಷಯದಲ್ಲಿ ಕಾಂಗ್ರೆಸ್ನದು ಒಂದು ನಿಲುವು, ಕಮ್ಯುನಿಸ್ಟರದು ಒಂದು ನಿಲುವು, ಮುಸ್ಲಿಮರದು ಒಂದು ನಿಲುವು ಇರಬಾರದು ಎಂದು ರವಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.