ಬುಧವಾರ, 17 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಚನ ಭ್ರಷ್ಟರಿಂದ ವಚನ ಪರಿಪಾಲಕ ರಾಮನ ಹೆಸರು ದುರ್ಬಳಕೆ: ಪ್ರಿಯಾಂಕ್ ಖರ್ಗೆ

Published 25 ಮಾರ್ಚ್ 2024, 8:18 IST
Last Updated 25 ಮಾರ್ಚ್ 2024, 8:18 IST
ಅಕ್ಷರ ಗಾತ್ರ

ಕಲಬುರಗಿ: ವಚನ ಭ್ರಷ್ಟರು ವಚನ ಪರಿಪಾಲಕ ರಾಮನ ಹೆಸರನ್ನು ಚುನಾವಣೆಗೆ ಬಳಸುವುದು ರಾಮನಿಗೆ ಮಾಡುವ ಮಹಾ ಅವಮಾನ ಎಂದು ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಬಿಜೆಪಿ ಮುಖಂಡರನ್ನು ಟೀಕಿಸಿದ್ದಾರೆ.

10 ವರ್ಷಗಳ ಹಿಂದೆ ಬಿಜೆಪಿಯವರು ಭವಿಷ್ಯ ಕಾಲದ ಕನಸುಗಳನ್ನು ಬಿತ್ತಿ ಮತ ಕೇಳಿದ್ದರು. ಈಗ 10 ವರ್ಷ ಕಳೆದ ನಂತರ ಭೂತಕಾಲದ ವಿಷಯಗಳ ಮೇಲೆ ಮತ ಕೇಳುತ್ತಿದ್ದಾರೆ ಎಂದು ಎಕ್ಸ್‌ನಲ್ಲಿ ಆರೋಪಿಸಿದ್ದಾರೆ.

ಈ ಭವಿಷ್ಯದಿಂದ ಭೂತಕಾಲದ ರಾಜಕೀಯದ ನಡುವಿನ 10 ವರ್ಷ ಯಾವುದೇ ಸಾಧನೆ ಇಲ್ಲದೆ, ಆಡಳಿತ ನಡೆಸಿದರು. 10 ವರ್ಷಗಳ ಆಡಳಿತದ ನಂತರವೂ ಅಚ್ಛೆ ದಿನಗಳ ಭರವಸೆ ಈಡೇರಲಿಲ್ಲ. ವಾರ್ಷಿಕ 2 ಕೋಟಿ ಉದ್ಯೋಗ ಸಿಗಲಿಲ್ಲ, ಆರ್ಥಿಕ ಸಮಾನತೆ ಬರಲಿಲ್ಲ, ಬೆಲೆ ಏರಿಕೆ ಪರಿಹಾರ ಸಿಗಲಿಲ್ಲ, ರೂಪಾಯಿ ಮೌಲ್ಯ ಕಾಣಲಿಲ್ಲ, ರೈತರ ಆದಾಯ ಡಬಲ್ ಆಗಲಿಲ್ಲ, ಸ್ವಿಸ್ ಬ್ಯಾಂಕ್ ಮಾಹಿತಿ ತರುತ್ತೇವೆ ಅಂದವರು ಎಸ್‌ಬಿಐ ಬ್ಯಾಂಕ್ ಮಾಹಿತಿಯನ್ನು ಮುಚ್ಚಿಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT