ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರಭಾಕರ ಕೋರೆ: ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷರಾಗಿ 40 ವರ್ಷ ಪೂರ್ಣ

Published 18 ಮೇ 2024, 15:34 IST
Last Updated 18 ಮೇ 2024, 15:34 IST
ಅಕ್ಷರ ಗಾತ್ರ

ಬೆಳಗಾವಿ: ‘ದಾನ ಪಡೆಯುವ ಕೈಗಳು ಶುದ್ಧವಾಗಿದ್ದರೆ ಮಾತ್ರ ದಾನ ನೀಡುವ ಕೈಗಳು ಮುಂದೆ ಬರುತ್ತವೆ. ಕರ್ನಾಟಕ ಲಿಂಗಾಯತ ಶಿಕ್ಷಣ (ಕೆಎಲ್‌ಇ) ಸಂಸ್ಥೆ ವಿಶ್ವಮಟ್ಟಕ್ಕೆ ಬೆಳೆಯಲು ಇಂಥ ಶುದ್ಧ ಕೈಗಳೇ ಕಾರಣ’ ಎಂದು ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಹೇಳಿದರು.

ಪ್ರಭಾಕರ ಕೋರೆ ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷರಾಗಿ 40 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ, ಸಂಸ್ಥೆಯ ಪರಿವಾರದವರು ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಬ್ರಿಟಿಷ್‌ ಆಡಳಿತದಲ್ಲಿ ಉನ್ನತ ಶಿಕ್ಷಣ ಪಡೆದಿದ್ದ ಏಳು ಶಿಕ್ಷಕರು ಸೇರಿ ಈ ಸಂಸ್ಥೆ ಕಟ್ಟಿದರು. ಸರ್ಕಾರದಲ್ಲಿ ದೊಡ್ಡ ಹುದ್ದೆ ಬಯಸದೇ ತಮ್ಮ ವೈಯಕ್ತಿಕ ಬದುಕನ್ನು ತ್ಯಾಗ ಮಾಡಿದರು. ಹಾಗಾಗಿ, ಅವರನ್ನು ಸಂಸ್ಥೆಯ ಸಪ್ತರ್ಷಿಗಳು ಎಂದು ಗೌರವಿಸುತ್ತೇವೆ. ಅವರೊಂದಿಗೆ ಸೇರಿದ ದಾನಿಗಳು ಸಂಸ್ಥೆ ಬೆಳೆಸಿದರು. ತಮ್ಮ ಆಸ್ತಿ, ಜೀವಿತಾವಧಿಯ ಗಳಿಕೆ ಎಲ್ಲವನ್ನೂ ದಾನ ಮಾಡಿದವರು ಹಲವರಿದ್ದಾರೆ’ ಎಂದು ನೆನೆದರು.

ಬೆಳಗಾವಿಯಲ್ಲಿ ಶನಿವಾರ ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಹಾಗೂ ಪತ್ನಿ ಆಶಾತಾಯಿ ಅವರನ್ನು ವಿವಿಧ ಶಿಕ್ಷಣ ಸಂಸ್ಥೆಗಳಿಂದ ಸನ್ಮಾನಿಸಲಾಯಿತು.  ಶಶೀಲ್‌ ನಮೋಶಿ, ವೀರಣ್ಣ ಚರಂತಿಮಠ, ಮಹಾಂತೇಶ ಕೌಜಲಗಿ, ಬಸವರಾಜ ದೇಶಮುಖ, ಅಲ್ಲಮ ಗುರು ಬಸವರಾಜ ಹಾಗೂ ಗಣ್ಯರು ಪಾಲ್ಗೊಂಡರು

ಬೆಳಗಾವಿಯಲ್ಲಿ ಶನಿವಾರ ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಹಾಗೂ ಪತ್ನಿ ಆಶಾತಾಯಿ ಅವರನ್ನು ವಿವಿಧ ಶಿಕ್ಷಣ ಸಂಸ್ಥೆಗಳಿಂದ ಸನ್ಮಾನಿಸಲಾಯಿತು. ಶಶೀಲ್‌ ನಮೋಶಿ, ವೀರಣ್ಣ ಚರಂತಿಮಠ, ಮಹಾಂತೇಶ ಕೌಜಲಗಿ, ಬಸವರಾಜ ದೇಶಮುಖ, ಅಲ್ಲಮ ಗುರು ಬಸವರಾಜ ಹಾಗೂ ಗಣ್ಯರು ಪಾಲ್ಗೊಂಡರು

‘ಸ್ವಾತಂತ್ರ್ಯ ಬಂದ ನಂತರ ಈ ಸಂಸ್ಥೆ ಪ್ರಜಾಪ್ರಭುತ್ವ ತಳಹದಿಯಲ್ಲಿ ಮುಂದುವರಿದಿದೆ. ಸತ್ಯ, ಪ್ರೇಮ ಮತ್ತು ತ್ಯಾಗ; ಈ ಮೂರು ಅಂಶಗಳನ್ನು ಅಳವಡಿಸಿಕೊಂಡಿದ್ದು ಇಷ್ಟು ದೊಡ್ಡ ಸಾಧನೆಗೆ ಕಾರಣ’ ಎಂದು ಅನುಭವ ಹಂಚಿಕೊಂಡರು.

ಬಾಗಲಕೋಟೆಯ ಬಸವೇಶ್ವರ ವಿದ್ಯಾವರ್ಧಕ ಸಂಸ್ಥೆಯ ಅಧ್ಯಕ್ಷ ವೀರಣ್ಣ ಚರಂತಿಮಠ, ಬಳ್ಳಾರಿಯ ವೀರೈಶವ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಅಲ್ಲಮ ಗುರು ಬಸವರಾಜ, ಕಲಬುರಗಿಯ ಶರಣಬಸವೇಶ್ವರ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಬಸವರಾಜ ದೇಶಮುಖ, ಹೈದರಾಬಾದ್‌ ಕರ್ನಾಟಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಶಶೀಲ್‌ ನಮೋಶಿ ಸೇರಿದಂತೆ ವಿವಿಧ ಶಿಕ್ಷಣ ಸಂಸ್ಥೆಗಳಿಂದ ಪ್ರಭಾಕರ ಕೋರೆ ಹಾಗೂ ಪತ್ನಿ ಆಶಾತಾಯಿ ಅವರನ್ನು ಸನ್ಮಾನಿಸಲಾಯಿತು.

ಕೋರೆ ಅವರ ಆಡಳಿತಾವಧಿಯಲ್ಲಿ ನಡೆದ ಸಾಧನೆಗಳ ಮಾಹಿತಿ ಒಳಗೊಂಡ ‘ರತ್ನರಾಜ’ ಗ್ರಂಥ ಲೋಕಾರ್ಪಣೆ ಮಾಡಲಾಯಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT