ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ ದ್ವಿತೀಯ ಪಿಯು ಅಂಧ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಅಥವಾ ಲ್ಯಾಪ್ಟಾಪ್ನಂತಹ ಡಿಜಿಟಲ್ ಸಾಧನಗಳನ್ನು ಬಳಸಿ ಪರೀಕ್ಷೆ ಬರೆಯಲು ಅನುಮತಿ ನೀಡಿದೆ.

2024–25ನೇ ಸಾಲಿನಲ್ಲಿ ಈ ಸೌಲಭ್ಯವನ್ನು ಎಸ್ಎಸ್ಎಲ್ಸಿ ಅಂಧ ವಿದ್ಯಾರ್ಥಿಗಳಿಗೆ ನೀಡಲಾಗಿತ್ತು. 25 ವಿದ್ಯಾರ್ಥಿಗಳು ಕಂಪ್ಯೂಟರ್ ಅಥವಾ ಲ್ಯಾಪ್ಟಾಪ್ ಬಳಸಿ ಪರೀಕ್ಷೆ ಬರೆದಿದ್ದರು. ಸೌಲಭ್ಯವನ್ನು ಈ ಬಾರಿ ದ್ವಿತೀಯ ಪಿಯು ಅಂಧ ವಿದ್ಯಾರ್ಥಿಗಳಿಗೂ ವಿಸ್ತರಿಸಲಾಗಿದ್ದು, ತಮ್ಮದೇ ಲ್ಯಾಪ್ಟಾಪ್ ತರಲು ಅನುಮತಿ ನೀಡಿದೆ.

‘ವಿದ್ಯಾರ್ಥಿಗಳಿಗೆ ಸ್ಕ್ರೈಬ್ ವ್ಯವಸ್ಥೆ ಇರುತ್ತದೆ. ಸ್ಕ್ರೈಬ್ ಬುಕ್ಲೆಟ್ನಲ್ಲಿ ಉತ್ತರ ಬರೆಯುವ ಬದಲು, ಡಿಜಿಟಲ್ ಸಾಧನ ಬಳಸಿ ಉತ್ತರಗಳನ್ನು ಟೈಪ್ ಮಾಡಬಹುದು. ಅದಕ್ಕಾಗಿ ತಾವು ದಾಖಲಾಗಿರುವ ಕಾಲೇಜುಗಳಲ್ಲಿ ಪ್ರತ್ಯೇಕವಾಗಿ ನೋಂದಣಿ ಮಾಡಿಕೊಳ್ಳಬೇಕು. ಡಿಜಿಟಲ್ ಸಾಧನಗಳಿಗೆ ಇಂಟರ್ನೆಟ್ ಸಂಪರ್ಕ ಇರಬಾರದು, ಟೈಪ್ ಮಾಡಿದ ಉತ್ತರಗಳನ್ನು ಮುದ್ರಿಸಿಕೊಂಡು ಪರೀಕ್ಷಾ ಕೇಂದ್ರದ ಮೇಲ್ವಿಚಾರಕರಿಗೆ ಸಲ್ಲಿಸಬೇಕು. ವಿದ್ಯಾರ್ಥಿಗಳು ಇಚ್ಚಿಸಿದರೆ ಹಿಂದಿನಂತೆ ಬುಕ್ಲೆಟ್ನಲ್ಲೇ ಉತ್ತರ ಬರೆಯಬಹುದು’ ಎಂದು ಮಂಡಳಿ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.