ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

68 ಸಾಧಕರು, 10 ಸಂಸ್ಥೆಗಳಿಗೆ ರಾಜ್ಯೋತ್ಸವ ಪ್ರಶಸ್ತಿ; ಇಲ್ಲಿದೆ ಪೂರ್ಣ ಪಟ್ಟಿ

Published 31 ಅಕ್ಟೋಬರ್ 2023, 10:02 IST
Last Updated 31 ಅಕ್ಟೋಬರ್ 2023, 11:12 IST
ಅಕ್ಷರ ಗಾತ್ರ

ಬೆಂಗಳೂರು: ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲಗೌಡ, ಇಸ್ರೊ ಅಧ್ಯಕ್ಷ ಎಸ್‌.ಸೋಮನಾಥ್, ಕವಿ ಸುಬ್ಬು ಹೊಲೆಯಾರ್‌, ರಂಗ ನಿರ್ದೇಶಕ ಚಿದಂಬರರಾವ್ ಜಂಬೆ, ಯಕ್ಷಗಾನ ಭಾಗವತರಾದ ಲೀಲಾವತಿ ಬೈಪಡಿತ್ತಾಯ, ಚಲನಚಿತ್ರ ನಟ ಡಿಂಗ್ರಿ ನಾಗರಾಜ್‌ ಸೇರಿ 68 ಮಂದಿ ಸಾಧಕರಿಗೆ 2023 ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ.

ಅಲ್ಲದೇ, ಮೈಸೂರು ರಾಜ್ಯವು ಕರ್ನಾಟಕ ಎಂದು ನಾಮಕರಣವಾಗಿ ನವೆಂಬರ್‌ 1 ಕ್ಕೆ 50 ವರ್ಷ ಪೂರ್ಣಗೊಳ್ಳುತ್ತಿರುವುದರಿಂದ, ಬೆಂಗಳೂರಿನ ಮಿಥಿಕ್‌ ಸೊಸೈಟಿ, ಶಿವಮೊಗ್ಗದ ಕರ್ನಾಟಕ ಸಂಘ, ಗದಗದ ವಿದ್ಯಾದಾನ ಸಮಿತಿ ಸೇರಿ ಒಟ್ಟು 10 ಸಂಘ– ಸಂಸ್ಥೆಗಳಿಗೆ ‘ಕರ್ನಾಟಕ ಸಂಭ್ರಮ–50 ರಾಜ್ಯೋತ್ಸವ ಪ್ರಶಸ್ತಿ–23’ ಎಂಬ ಹೆಸರಿನ ಪ್ರಶಸ್ತಿ ನೀಡಲು ತೀರ್ಮಾನಿಸಲಾಗಿದೆ.

ಪ್ರಶಸ್ತಿಯು ₹5 ಲಕ್ಷ ನಗದು ಮತ್ತು 25 ಗ್ರಾಂ ಚಿನ್ನದ ಪದಕವನ್ನು ಒಳಗೊಂಡಿದೆ. ಬುಧವಾರ ಸಂಜೆ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಪ್ರಶಸ್ತಿ ಪಟ್ಟಿಯನ್ನು ಬಿಡುಗಡೆಗೊಳಿಸಿದರು.

ಆ ಬಳಿಕ ಮಾತನಾಡಿದ ಅವರು, ಈ ಬಾರಿ ಪ್ರಶಸ್ತಿಗಾಗಿ ನೇರವಾಗಿ 1,357 ಅರ್ಜಿಗಳು, ಸೇವಾಸಿಂಧು ಮೂಲಕ 2,166 ಅರ್ಜಿಗಳೂ ಸೇರಿ ಒಟ್ಟು 26,555 ನಾಮನಿರ್ದೇಶನಗಳು ಬಂದಿದ್ದವು. ಈ ಪೈಕಿ 176 ಮಂದಿಯ ಪಟ್ಟಿ ತಯಾರಿಸಲಾಯಿತು. ಅಂತಿಮವಾಗಿ 68 ಮಂದಿ ಸಾಧಕರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು. ಈ ಬಾರಿ ಯಾವುದೇ ಪ್ರಭಾವಗಳಿಗೆ ಮಣಿಯಲಿಲ್ಲ. ಅರ್ಜಿ ಸಲ್ಲಿಸದ 5 ರಿಂದ 6 ಮಂದಿಯನ್ನು ಆಯ್ಕೆ ಮಾಡಲಾಯಿತು ಎಂದರು.

‘ಅರ್ಜಿ ಕರೆದು ಪ್ರಶಸ್ತಿ ನೀಡುವ ಪರಿಪಾಟವನ್ನು ನಿಲ್ಲಿಸುವ ಬಗ್ಗೆ ಪರಿಶೀಲನೆ ನಡೆಸಲಾಗುವುದು’ ಎಂದು ಅವರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಶತಾಯುಷಿಗಳಾದ ರೂಪ್ಲಾ ನಾಯಕ್‌ ಮತ್ತು  ಹುಸೇನಾಬಿ ಬುಡೆನ್‌ ಸಾಬ್‌ ಸಿದ್ದಿ. ಹಕ್ಕಿಪಿಕ್ಕಿ ಜನಾಂಗದ ಶಿವಂಗಿ ಶಣ್ಮರಿ, ಮಂಗಳಮುಖಿ ನರಸಪ್ಪಾ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಇದೇ ಮೊದಲ ಬಾರಿಗೆ ಪತ್ರಿಕಾ ವಿತರಕರೊಬ್ಬರನ್ನು (ಮೈಸೂರಿನ ಜವರಪ್ಪ) ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಒಟ್ಟು 13 ಮಹಿಳೆಯರು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ ಎಂದು ತಂಗಡಗಿ ಹೇಳಿದರು.

ಕೊಪ್ಪಳ ಜಿಲ್ಲೆಯ ಹಂದ್ರಾಳದ ಹುಚ್ಚಮ್ಮ ಬಸಪ್ಪ ಚೌದ್ರಿ ತಮ್ಮ ಎರಡು ಎಕರೆ ಭೂಮಿಯನ್ನು ಶಾಲೆಗಾಗಿ ದಾನ ಮಾಡಿದರು. ಪತಿಯನ್ನು ಕಳೆದುಕೊಂಡ ಮತ್ತು ಮಕ್ಕಳಿಲ್ಲದ ಈಕೆ ಶಾಲೆಯಲ್ಲಿ ಬಿಸಿಯೂಟ ತಯಾರಿಸುವ ಕೆಲಸ ಮಾಡುತ್ತಿದ್ದರು. ಶಾಲಾ ಮಕ್ಕಳ ಅಭ್ಯುದಯಕ್ಕಾಗಿ ಭೂಮಿಯನ್ನು ದಾನ ಮಾಡಿರುವುದು ದೊಡ್ಡ ಆದರ್ಶ. ಅಲ್ಲಿ ಸಾಕಷ್ಟು ಶ್ರೀಮಂತರು ಇದ್ದರೂ ಯಾರೂ ಇಂತಹ ಕೆಲಸಕ್ಕೆ ಮುಂದಾಗಿಲ್ಲ ಎಂದು ಸಚಿವರು ತಿಳಿಸಿದರು.

ಮಾರ್ಥಾ ಜಾಕಿಮೋವಿಚ್‌ ಪೋಲೆಂಡ್‌ ದೇಶದಲ್ಲಿ ಜನಿಸಿದವರು. ಕರ್ನಾಟಕ ಕಂಡ ಶ್ರೇಷ್ಠ ಕಲಾ ವಿಮರ್ಶಕಿ. ಇವರ ಅಪ್ಪ–ಅಮ್ಮ ಇಬ್ಬರೂ ಕಲಾ ಇತಿಹಾಸಕಾರರು. 1984 ರಲ್ಲಿ ಇವರು ಬೆಂಗಳೂರಿಗೆ ಬಂದು ನೆಲೆಸಿದ ಬಳಿಕ ‘ಡೆಕ್ಕನ್ ಹೆರಾಲ್ಡ್‌’, ‘ದಿ ಹಿಂದೂ’ ಮತ್ತು ‘ಟೈಮ್ಸ್‌ ಆಫ್‌ ಡೆಕ್ಕನ್‌’ ಪತ್ರಿಕೆಗಳಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲ ಕಲಾ ವಿಮರ್ಶೆಗಳನ್ನು ಬರೆದಿದ್ದಾರೆ. ಇವರು ಕರ್ನಾಟಕ ಲಲಿತಕಲಾ ಅಕಾಡೆಮಿಯ ಗೌರವ ಪ್ರಶಸ್ತಿಗೂ ಪಾತ್ರರಾಗಿದ್ದಾರೆ ಎಂದರು.

ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಮಸೂದೆ ವಿಧಾನಮಂಡಲದ ಎರಡೂ ಸದನಗಳಲ್ಲಿ ಅಂಗೀಕಾರಗೊಂಡಿದೆ. ಕಾಯ್ದೆಯ ಕರಡು ರೂಪಿಸಲಾಗುತ್ತಿದೆ. ನವೆಂಬರ್‌ ಕೊನೆಯೊಳಗೆ ಕರಡನ್ನು ಮುಖ್ಯಮಂತ್ರಿಯವರಿಗೆ ಒಪ್ಪಿಸಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಸಂಗೀತ

ಡಾ.ನಯನ ಎಸ್. ಮೋರೆ (ಬೆಂಗಳೂರು)

ನೀಲಾ ಎಂ. ಕೊಡ್ಲಿ (ಧಾರವಾಡ)

ಶಬ್ಬೀರ್ ಅಹಮದ್‌(ಬೆಂಗಳೂರು)

ಡಾ ಎಸ್‌ ಬಾಳೇಶ ಭಜಂತ್ರಿ ( ಬೆಳಗಾವಿ)

ಚಲನಚಿತ್ರ

ಡಿಂಗ್ರಿ ನಾಗರಾಜ (ಬೆಂಗಳೂರು)

ವಿ ಜನಾರ್ದನ (ಬ್ಯಾಂಕ್‌ ಜನಾರ್ದನ) (ಬೆಂಗಳೂರು)

ರಂಗಭೂಮಿ

ಎ. ಜಿ. ಚಿದಂಬರ ರಾವ್‌ ಜಂಬೆ (ಶಿವಮೊಗ್ಗ)

ಪಿ. ಗಂಗಾಧರ ಸ್ವಾಮಿ ( ಮೈಸೂರು)

ಹೆಚ್‌. ಬಿ. ಸರೋಜಮ್ಮ( ಧಾರವಾಡ)

ತಯ್ಯಬಖಾನ್‌ ಎಂ ಇನಾಮದಾರ (ಬಾಗಲಕೋಟೆ)

ಡಾ. ವಿಶ್ವನಾಥ್ ವಂಶಾಕೃತ ಮಠ (ಬಾಗಲಕೋಟೆ)

ಪಿ. ತಿಪ್ಪೇಸ್ವಾಮಿ ( ಚಿತ್ರದುರ್ಗ)

ಶಿಲ್ಪಕಲೆ/ಚಿತ್ರಕಲೆ/ಕರಕುಶಲ

ಟಿ. ಶಿವಶಂಕರ್ (ದಾವಣಗೆರೆ)

ಕಾಳಪ್ಪ ವಿಶ್ವಕರ್ಮ (ರಾಯಚೂರು)

ಮಾರ್ಥಾ ಜಾಕಿಮೋವಿಚ್‌ (ಬೆಂಗಳೂರು)

ಪಿ. ಗೌರಯ್ಯ (ಮೈಸೂರು)

ಯಕ್ಷಗಾನ / ಬಯಲಾಟ

ಅರ್ಗೋಡು ಮೋಹನದಾಸ್‌ ಶೆಣೈ (ಉಡುಪಿ)

ಕೆ. ಲೀಲಾವತಿ ಬೈಪಾಡಿತ್ತಾಯ (ದಕ್ಷಿಣ ಕನ್ನಡ)

ಕೇಶಪ್ಪ ಶಿಳ್ಳಿಕ್ಯಾತರ (ಕೊಪ್ಪಳ)

ದಳವಾಯಿ ಸಿದ್ದಪ್ಪ (ಹಂದಿಜೋಗಿ) (ವಿಜಯನಗರ)

ಜಾನಪದ

ಹುಸೇನಾಬಿ ಬುಡೆನ್‌ ಸಾಬ್‌ ಸಿದ್ದಿ (ಉತ್ತರ ಕನ್ನಡ)

ಶಿವಂಗಿ ಶಣ್ಮರಿ (ದಾವಣಗೆರೆ)

ಮಹದೇವು (ಮೈಸೂರು)

ನರಸಪ್ಪಾ (ಬೀದರ್‌)

‌ಶಕುಂತಲಾ ದೇವಲಾನಾಯಕ (ಕಲಬುರಗಿ)

ಎಚ್‌ ಕೆ ಕಾರಮಂಚಪ್ಪ (ಬಳ್ಳಾರಿ)

ಡಾ ಶಂಭು ಬಳಿಗಾರ (ಗದಗ)

ವಿಭೂತಿ ಗುಂಡಪ್ಪ (ಕೊಪ್ಪಳ)

ಚೌಡಮ್ಮ (ಚಿಕ್ಕಮಗಳೂರು)

ಸಮಾಜಸೇವೆ

ಹುಚ್ಚಮ್ಮ ಬಸಪ್ಪ ಚೌದ್ರಿ (ಕೊಪ್ಪಳ)

ಚಾರ್ಮಾಡಿ ಹಸನಬ್ಬ ( ದಕ್ಷಿಣ ಕನ್ನಡ)

ಕೆ.ರೂಪಾ ನಾಯಕ್ (ದಾವಣಗೆರೆ)

ಪೂಜ್ಯ ನಿಜಗುಣಾನಂದ ಮಹಾಸ್ವಾಮಿಗಳು ನಿಷ್ಕಲಮಂಟಪ (ಬೆಳಗಾವಿ)

ನಾಗರಾಜು ಜಿ ( ಬೆಂಗಳೂರು)

ಆಡಳಿತ

ಜಿ ವಿ ಬಲರಾಮ್‌ (ತುಮಕೂರು)

ವೈದ್ಯಕೀಯ

ಡಾ ಸಿ ರಾಮಚಂದ್ರ (ಬೆಂಗಳೂರು)

ಡಾ ಪ್ರಶಾಂತ್ ಶೆಟ್ಟಿ (ದಕ್ಷಿಣ ಕನ್ನಡ)

ಸಾಹಿತ್ಯ

ಪ್ರೊ. ಸಿ. ನಾಗಣ್ಣ (ಚಾಮರಾಜನಗರ)

ಸುಬ್ಬು ಹೊಲೆಯಾರ್‌ (ಎಚ್‌.ಕೆ.ಸುಬ್ಬಯ್ಯ) (ಹಾಸನ)

ಸತೀಶ ಕುಲಕರ್ಣಿ (ಹಾವೇರಿ)

ಲಕ್ಷ್ಮೀಪತಿ ಕೋಲಾರ (ಕೋಲಾರ)

ಪರಪ್ಪ ಗುರುಪಾದಪ್ಪ ಸಿದ್ದಾಪುರ (ವಿಜಯನಗರ)

ಡಾ. ಕೆ. ಷರೀಫಾ (ಬೆಂಗಳೂರು)

ಶಿಕ್ಷಣ

ರಾಮಪ್ಪ (ರಾಮಣ್ಣ) ಹವಳೆ ( ರಾಯಚೂರು)

ಕೆ. ಚಂದ್ರಶೇಖರ್ (ಕೋಲಾರ)

ಕೆ.ಟಿ ಚಂದ್ರು (ಮಂಡ್ಯ)

ಕ್ರೀಡೆ

ದಿವ್ಯ ಟಿ.ಎಸ್. (ಕೋಲಾರ)

ಅದಿತಿ ಆಶೋಕ್‌ (ಬೆಂಗಳೂರು)

ಆಶೋಕ್ ಗದಿಗೆಪ್ಪ ಏಣಗಿ (ಧಾರವಾಡ)

ನ್ಯಾಯಾಂಗ

ನ್ಯಾ. ವಿ. ಗೋಪಾಲಗೌಡ (ಚಿಕ್ಕಬಳ್ಳಾಪುರ)

ಕೃಷಿ–ಪರಿಸರ

ಸೋಮನಾಥರೆಡ್ಡಿ ಪೂರ್ಮಾ (ಕಲಬುರಗಿ)

ದ್ಯಾವನಗೌಡ ಟಿ. ಪಾಟೀಲ (ಧಾರವಾಡ)

ಶಿವರೆಸ್ಸಿ ಹನುಮರೆಡ್ಡಿ ವಾಸನ (ಬಾಗಲಕೋಟೆ)

ಸಂಕೀರ್ಣ

ಎ.ಎಂ ಮುದರಿ (ವಿಜಯಪುರ)

ಹಾಜಿ ಅಬ್ದುಲ್ಲಾ ಪರ್ಕಳ (ಉಡುಪಿ)

ಮಿಮಿಕ್ರಿ ದಯಾನಂದ್ (ಮೈಸೂರು)

ಡಾ. ಕಬ್ಬಿನಾಲೆ ವಸಂತ ಭಾರಧ್ವಾಜ್ (ಮೈಸೂರು)

ಲೆ. ಜ. ಕೊಡನ ಪೂವಯ್ಯ ಕಾರ್ಯಪ್ಪ (ಕೊಡಗು)

ಮಾಧ್ಯಮ

ದಿನೇಶ ಅಮೀನ್‌ಮಟ್ಟು (ದಕ್ಷಿಣ ಕನ್ನಡ)

ಜವರಪ್ಪ (ಮೈಸೂರು)

ಮಾಯಾ ಶರ್ಮ (ಬೆಂಗಳೂರು)

ರಫೀ ಭಂಡಾರಿ (ವಿಜಯಪುರ)

ವಿಜ್ಞಾನ‌/ ತಂತ್ರಜ್ಞಾನ

ಎಸ್‌. ಸೋಮನಾಥನ್‌ ಶ್ರೀಧರ್‌ ಪನಿಕರ್‌ (ಬೆಂಗಳೂರು)

ಪ್ರೊ. ಗೋಪಾಲನ್‌ ಜಗದೀಶ್‌ (ಚಾಮರಾಜನಗರ)

ಹೊರನಾಡು/ ಹೊರದೇಶ

ಸೀತಾರಾಮ ಅಯ್ಯಂಗಾರ್‌

ದೀಪಕ್‌ ಶೆಟ್ಟಿ

ಶಶಿಕಿರಣ್‌ ಶೆಟ್ಟಿ

ಸ್ವಾತಂತ್ರ್ಯ ಹೋರಾಟಗಾರ

ಪುಟ್ಟಸ್ವಾಮಿಗೌಡ (ರಾಮನಗರ)

ಸಂಘ ಸಂಸ್ಥೆಗಳು

ಕರ್ನಾಟಕ ಸಂಘ (ಶಿವಮೊಗ್ಗ)

ಬಿ.ಎನ್.ಶ್ರೀರಾಮ ಪುಸ್ತಕ ಪ್ರಕಾಶನ (ಮೈಸೂರು)

ಮಿಥಿಕ್ ಸೊಸೈಟಿ (ಬೆಂಗಳೂರು)

ಕರ್ನಾಟಕ ಸಾಹಿತ್ಯ ಸಂಘ (ಯಾದಗಿರಿ)

ಮೌಲಾನಾ ಆಜಾದ್ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಾಂಸ್ಕೃತಿಕ ಸಂಘ (ದಾವಣಗೆರೆ)

ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟ (ದಕ್ಷಿಣ ಕನ್ನಡ)

ಸ್ನೇಹರಂಗ ಹವ್ಯಾಸಿ ಕಲಾ ಸಂಸ್ಥೆ (ಬಾಗಲಕೋಟೆ)

ಚಿಣ್ಣರ ಬಿಂಬ (ಮುಂಬೈ)

ಮಾರುತಿ ಜನಸೇವಾ ಸಂಘ (ದಕ್ಷಿಣ ಕನ್ನಡ)

ವಿದ್ಯಾದಾನ ಸಮಿತಿ (ಗದಗ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT