ಪ್ರಭು ಶ್ರೀರಾಮಚಂದ್ರನ ವಚನ ಪಾಲನೆ, ಪ್ರಜಾಸೇವೆಯ ಬದ್ಧತೆ, ನ್ಯಾಯ ನಿಷ್ಠುರತೆ, ಪ್ರೀತಿ - ಮಮತೆ ಮುಂತಾದ ಮಾನವೀಯ ಮೌಲ್ಯಗಳು ನಮ್ಮೆಲ್ಲರ ಆದರ್ಶವಾಗಲಿ.
— Siddaramaiah (@siddaramaiah) April 6, 2025
ಪಾನಕ - ಕೋಸಂಬರಿಯ ಜೊತೆ ಸ್ನೇಹ - ಸೌಹಾರ್ದತೆಯು ಮಿಳಿತಗೊಳ್ಳಲಿ, ದ್ವೇಷ ಅಳಿದು ಪ್ರೀತಿಯ ಬೆಳಕು ಎಲ್ಲೆಡೆ ಬೆಳಗಲಿ ಎಂದು ಹಾರೈಸುತ್ತೇನೆ.
ಸರ್ವರಿಗೂ ರಾಮನವಮಿಯ ಶುಭಾಶಯಗಳು.… pic.twitter.com/w0dpwQakzM
ಸತ್ಯ, ತ್ಯಾಗ, ಧೈರ್ಯ, ಮತ್ತು ದಯೆಯ ಮೂರ್ತಿಯಾದ ಶ್ರೀರಾಮ, ಧರ್ಮಸ್ಥಾಪನೆಯ ಸಂಕೇತ. ರಾಮನ ಆದರ್ಶಗಳು ನಮ್ಮ ಜೀವನಕ್ಕೆ ಪ್ರೇರಣೆ, ಅವರ ಹಾದಿ ನಾವು ಅನುಸರಿಸಬೇಕಾದ ದಾರಿ.
— DK Shivakumar (@DKShivakumar) April 6, 2025
ರಾಮನವಮಿ ಕೇವಲ ಹಬ್ಬವಲ್ಲ. ನಮ್ಮ ಆತ್ಮದಲ್ಲಿ ರಾಮನ ಮೌಲ್ಯಗಳನ್ನು ನೆಲೆನಿಲ್ಲಿಸುವ ದಿನ.
ಸರ್ವರಿಗೂ ರಾಮನವಮಿಯ ಹಾರ್ದಿಕ ಶುಭಾಶಯಗಳು.#RamNavami pic.twitter.com/JLK3K3KiYB
ನಾಡಿನ ಸಮಸ್ತ ಜನತೆಗೆ ಶ್ರೀ ರಾಮನವಮಿಯ ಶುಭಾಶಯಗಳು.
— R. Ashoka (@RAshokaBJP) April 6, 2025
|| ಶ್ರೀ ರಾಮ ರಾಮ ರಾಮೇತಿ, ರಮೇ ರಾಮೇ ಮನೋರಮೇ|
ಸಹಸ್ರನಾಮ ತತ್ತುಲ್ಯಂ, ರಾಮನಾಮ ವರಾನನೇ||
ರಾಮನ ಆದರ್ಶ, ತ್ಯಾಗ, ಗುಣ ಎಲ್ಲರಿಗೂ ಸದಾ ಆದರ್ಶಪ್ರಾಯವಾಗಲಿ. pic.twitter.com/xSqLd0m4Qs
'ಭಾರತೀಯ ಸಂಸ್ಕೃತಿಯ ಪ್ರತೀಕ, ಆದರ್ಶಯುತ ಆಡಳಿತ, ಪರಿಶುದ್ಧತೆ, ಸಮಾನತೆ, ಸಹೃದಯತೆ, ವೈಚಾರಿಕತೆ, ಸಹಿಷ್ಣುತೆ, ಸರಳತೆ, ಕೌಶಲ್ಯತೆ, ಇವೆಲ್ಲವುಗಳ ಸಂಗಮ ವ್ಯಕ್ತಿತ್ವವೇ ಪ್ರಭು ಶ್ರೀ ರಾಮಚಂದ್ರ'.
— Vijayendra Yediyurappa (@BYVijayendra) April 6, 2025
ನಾಡಿನ ಸಮಸ್ತ ಜನತೆಗೆ ಶ್ರೀರಾಮನವಮಿ ಹಬ್ಬದ ಹಾರ್ದಿಕ ಶುಭಾಶಯಗಳು. ಈ ಪವಿತ್ರ ದಿನದಂದು ನಾಡಿನೆಲ್ಲೆಡೆ ಸುಖ, ಶಾಂತಿ, ಸಂತೋಷ ಹಾಗೂ ಸಮೃದ್ಧಿ… pic.twitter.com/ydk30fQiUp
ನಾಡಿನ ಸಮಸ್ತ ಜನತೆಗೆ ಶ್ರೀ ರಾಮನವಮಿಯ ಹಾರ್ದಿಕ ಶುಭಾಶಯಗಳು.
— Basavaraj S Bommai (@BSBommai) April 6, 2025
ಮರ್ಯಾದಾ ಪುರುಷೋತ್ತಮ ಪ್ರಭು ಶ್ರೀರಾಮಚಂದ್ರರು ಸರ್ವರ ಬಾಳಿನಲ್ಲಿ ಒಳಿತನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ.
ಪ್ರಭು ಶ್ರೀರಾಮಚಂದ್ರರ ಆದರ್ಶ, ನ್ಯಾಯ ತತ್ಪರತೆ, ಸತ್ಯನಿಷ್ಠೆ ಪ್ರತಿಯೊಬ್ಬರಿಗೂ ಪ್ರೇರಣೆಯಾಗಿದೆ.
ಜೈ ಶ್ರೀ ರಾಮ್! pic.twitter.com/5vPYUDvQa2
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.