ಶುಕ್ರವಾರ, 15 ಆಗಸ್ಟ್ 2025
×
ADVERTISEMENT
ADVERTISEMENT

Renukaswamy Murder | ಜಾಮೀನು ಆದೇಶ ರದ್ದು: ದರ್ಶನ್, ಪವಿತ್ರಾ ಮತ್ತೆ ಜೈಲಿಗೆ

Published : 14 ಆಗಸ್ಟ್ 2025, 23:30 IST
Last Updated : 14 ಆಗಸ್ಟ್ 2025, 23:30 IST
ಫಾಲೋ ಮಾಡಿ
Comments
ಪವಿತ್ರಾಗೌಡ 
ಪವಿತ್ರಾಗೌಡ 
ಠಾಣೆಯಲ್ಲೇ ವೈದ್ಯಕೀಯ ಪರೀಕ್ಷೆ:
ಗಿರಿನಗರದಲ್ಲಿ ಪ್ರದೂಷ್‌ ರಾವ್‌, ಮೈಸೂರಿನಲ್ಲಿ ನಾಗರಾಜ್‌, ಆರ್‌ಪಿಸಿ ಲೇಔಟ್‌ನಲ್ಲಿ ಲಕ್ಷ್ಮಣ್‌, ಚಿತ್ರದುರ್ಗದಲ್ಲಿ ಅನುಕುಮಾರ್ ಹಾಗೂ ಜಗದೀಶ್‌ ಅವರನ್ನು ಬಂಧಿಸಲಾಯಿತು. ‌ಅನ್ನಪೂರ್ಣೇಶ್ವರಿ ಠಾಣೆಗೆ ವೈದ್ಯರನ್ನು ಕರೆಸಿಕೊಂಡು ಐವರು ಆರೋಪಿಗಳನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಯಿತು ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.
ಬೆಂಗಳೂರಿನ ರಾಜರಾಜೇಶ್ವರಿನಗರದಲ್ಲಿ ಆರೋಪಿ ಪವಿತ್ರಾಗೌಡ ಅವರನ್ನು ಪೊಲೀಸರು ಬಂಧಿಸಿದರು 
ಪ್ರಜಾವಾಣಿ ಚಿತ್ರ/ ವಿ.ಪುಷ್ಕರ್‌
ಬೆಂಗಳೂರಿನ ರಾಜರಾಜೇಶ್ವರಿನಗರದಲ್ಲಿ ಆರೋಪಿ ಪವಿತ್ರಾಗೌಡ ಅವರನ್ನು ಪೊಲೀಸರು ಬಂಧಿಸಿದರು  ಪ್ರಜಾವಾಣಿ ಚಿತ್ರ/ ವಿ.ಪುಷ್ಕರ್‌
ಮೂರನೇ ಬಾರಿಗೆ ‘ಜೈಲು ದರ್ಶನ’
ಪತ್ನಿ ವಿಜಯಲಕ್ಷ್ಮಿ ಅವರಿಗೆ ಥಳಿಸಿದ್ದ ಆರೋಪದಡಿ ದರ್ಶನ್‌ ಅವರು 2011ರಲ್ಲಿ ಜೈಲಿಗೆ ಹೋಗಿದ್ದರು. ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಎರಡನೇ ಬಾರಿಗೆ ಜೈಲು ಸೇರಿದ್ದ ಅವರು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಜಾಮೀನು ರದ್ದಾಗಿದ್ದರಿಂದಾಗಿ ಮತ್ತೆ ಜೈಲುವಾಸ ಅನುಭವಿಸಲಿದ್ದಾರೆ.
ಜಾಮೀನು ರದ್ದು ಕೇಳಿ ಶಾಕ್‌ ಆದೆ: ಡಿಕೆಶಿ
‘ದರ್ಶನ್‌ ಜಾಮೀನು ರದ್ದಾದ ವಿಷಯ ಕೇಳಿ ಶಾಕ್ ಆಯಿತು’ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೇಳಿದರು. ಸುದ್ದಿಗಾರರ ಜತೆ ಗುರುವಾರ ಮಾತನಾಡಿದ ಅವರು ‘ಸದನ ನಡೆಯುವಾಗ ಮುಖ್ಯಮಂತ್ರಿ ಈ ವಿಚಾರವನ್ನು ಹೇಳಿದರು. ನಾನೇನೂ ಮಾಡಲು ಆಗಲ್ಲ. ನ್ಯಾಯಾಲಯ ತೆಗೆದುಕೊಂಡ ನಿರ್ಧಾರದ ಬಗ್ಗೆ ನಾವು ಏನೂ ಮಾತನಾಡಬಾರದು’ ಎಂದರು. ಆರೋಪಿಗಳಿಗೆ ಜೈಲಿನಲ್ಲಿ ರಾಜಾತಿಥ್ಯ ನೀಡುವ ಬಗ್ಗೆ ಕೋರ್ಟ್‌ ಪ್ರಸ್ತಾಪಿಸಿದೆ. ಇಂತಹ ನಡೆಯ ಮೇಲೆ ಕಣ್ಣಿಡುವುದಾಗಿ ಹೇಳಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ‘ಎಚ್ಚರಿಕೆಯಿಂದ ಇರಬೇಕು ಅಲ್ಲವಾ’ ಎಂದು ಪ್ರಶ್ನಿಸಿದರು.
ಪೋಸ್ಟ್ ಅಳಿಸಿದ ಪವಿತ್ರಾ
‘ದೇವರ ಮೇಲೆ ನಂಬಿಕೆ ಇಡಬೇಕು. ಬಹುಶಃ ಅವರ ಉತ್ತರ ‘ಕಾಯಿರಿ’ ಅನ್ನೋದಾಗಿರಬಹುದು. ಕೆಲವು ವಿಳಂಬಗಳು ದೈವಿಕ ರಕ್ಷಣೆಯಾಗಿರುತ್ತದೆ. ನಾನು ತಾಳ್ಮೆ ಮತ್ತು ನಂಬಿಕೆಯನ್ನು ಆರಿಸಿಕೊಳ್ಳುತ್ತೇನೆ’ ಎಂದು ಪವಿತ್ರಾ ಗೌಡ ಅವರು ಗುರುವಾರ ಬೆಳಿಗ್ಗೆ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ವೊಂದನ್ನು ಹಾಕಿದ್ದರು. ನ್ಯಾಯಾಲಯದ ಆದೇಶ ಬಂದ ಬಳಿಕ ಪೋಸ್ಟ್ ಅಳಿಸಿ ಹಾಕಿದ್ದರು.
ಬಂಧನ ಪ್ರಕ್ರಿಯೆಯನ್ನು ಮೊಬೈಲ್‌ನಲ್ಲಿ ಚಿತ್ರೀಕರಣ ಮಾಡುತ್ತಿದ್ದ ಪೊಲೀಸ್ ಸಿಬ್ಬಂದಿಯೊಂದಿಗೆ ವಾಗ್ವಾದ ನಡೆಸಿದ ಪವಿತ್ರಾಗೌಡ

ಬಂಧನ ಪ್ರಕ್ರಿಯೆಯನ್ನು ಮೊಬೈಲ್‌ನಲ್ಲಿ ಚಿತ್ರೀಕರಣ ಮಾಡುತ್ತಿದ್ದ ಪೊಲೀಸ್ ಸಿಬ್ಬಂದಿಯೊಂದಿಗೆ ವಾಗ್ವಾದ ನಡೆಸಿದ ಪವಿತ್ರಾಗೌಡ  

ಪ್ರಜಾವಾಣಿ ಚಿತ್ರ/ವಿ.ಪುಷ್ಕರ್‌

ಯಾರ್‍ಯಾರ ಜಾಮೀನು ಆದೇಶ ರದ್ದು?
2024ರ ಜೂನ್‌ 9ರಂದು ಬೆಂಗಳೂರಿನ ಸುಮನಹಳ್ಳಿಯ ಸತ್ವ ಅನುಗ್ರಹ ಅಪಾರ್ಟ್‌ಮೆಂಟ್‌ ಬಳಿಯ ಮೋರಿ ಬಳಿ ರೇಣುಕಸ್ವಾಮಿ ಅವರ ಮೃತದೇಹ ಪತ್ತೆಯಾಗಿತ್ತು. ಪಶ್ಚಿಮ ವಿಭಾಗದ ಕಾಮಾಕ್ಷಿಪಾಳ್ಯ ಪೊಲೀಸ್‌ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಿಸಿಕೊಂಡು 17 ಮಂದಿ ಆರೋಪಿಗಳನ್ನು ಜೂನ್‌ 10ರಂದು ಪೊಲೀಸರು ಬಂಧಿಸಿದ್ದರು. ಎಲ್ಲ ಆರೋಪಿಗಳೂ ಜಾಮೀನಿನ ಮೇಲೆ ಕೆಲವು ತಿಂಗಳ ಹಿಂದೆ ಬಿಡುಗಡೆ ಆಗಿದ್ದರು. 17 ಆರೋಪಿಗಳ ಪೈಕಿ ಏಳು ಆರೋಪಿಗಳ ಜಾಮೀನು ಆದೇಶವನ್ನು ಸುಪ್ರೀಂ ಕೋರ್ಟ್‌ ಗುರುವಾರ ರದ್ದುಗೊಳಿಸಿದೆ.
ಬೆಂಗಳೂರಿನ ರಾಜರಾಜೇಶ್ವರಿನಗರದ ನಿವಾಸದಲ್ಲಿ ಆರೋಪಿ ಪವಿತ್ರಾಗೌಡ ಅವರನ್ನು ಪೊಲೀಸರು ಬಂಧಿಸಿದರು

ಬೆಂಗಳೂರಿನ ರಾಜರಾಜೇಶ್ವರಿನಗರದ ನಿವಾಸದಲ್ಲಿ ಆರೋಪಿ ಪವಿತ್ರಾಗೌಡ ಅವರನ್ನು ಪೊಲೀಸರು ಬಂಧಿಸಿದರು 

ಪ್ರಜಾವಾಣಿ ಚಿತ್ರ/ ವಿ.ಪುಷ್ಕರ್‌

ಜಗದೀಶ್

ಜಗದೀಶ್ 

ಅನುಕುಮಾರ್

ಅನುಕುಮಾರ್ 

ಎಂ.ಲಕ್ಷ್ಮಣ್‌

ಎಂ.ಲಕ್ಷ್ಮಣ್‌ 

ಆರ್‌.ನಾಗರಾಜ್‌

ಆರ್‌.ನಾಗರಾಜ್‌ 

ಪ್ರದೂಷ್‌

ಪ್ರದೂಷ್‌  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT