ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಸ್‌ಪೋರ್ಟ್ ವಶ | ಡಿಆರ್‌ಟಿಗಿಲ್ಲ ಅಧಿಕಾರ: ಹೈಕೋರ್ಟ್

Published 16 ಡಿಸೆಂಬರ್ 2023, 2:54 IST
Last Updated 16 ಡಿಸೆಂಬರ್ 2023, 2:54 IST
ಅಕ್ಷರ ಗಾತ್ರ

ಬೆಂಗಳೂರು: ‘ಸಾಲ ವಸೂಲಾತಿ ನ್ಯಾಯಮಂಡಳಿಗೆ (ಡಿಆರ್‌ಟಿ) ನಾಗರಿಕರ ಪಾಸ್‌ಪೋರ್ಟ್‌ ಅನ್ನು ವಶಕ್ಕೆ ಪಡೆದುಕೊಳ್ಳುವ ಅಧಿಕಾರವಿಲ್ಲ‘ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.

ಡಿಆರ್‌ಟಿ ಕ್ರಮವನ್ನು ಪ್ರಶ್ನಿಸಿ ಮುಂಬೈನ ಶಂಭು ಕುಮಾರ್ ಕಸ್ಲಿವಾಲಾ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಕುರಿತಂತೆ ಆದೇಶಿಸಿದ್ದು, ಅರ್ಜಿದಾರರಿಂದ ವಶಕ್ಕೆ ಪಡೆದಿರುವ ಪಾಸ್‌ಪೋರ್ಟ್‌ ಅನ್ನು ಹಿಂದಿರುಗಿಸುವಂತೆ ಡಿಆರ್‌ಟಿಗೆ ನಿರ್ದೇಶಿಸಿದೆ.

‘ಡಿಆರ್‌ಟಿ ಸಿವಿಲ್ ನ್ಯಾಯಾಲಯದಂತೆ ಕಾರ್ಯ ನಿರ್ವಹಿಸುವ ಕಾರಣ ಈ ನ್ಯಾಯಾಲಯಕ್ಕೆ ಪಾಸ್‌ಪೋರ್ಟ್‌ ಅನ್ನು ತನ್ನ ವಶದಲ್ಲಿಟ್ಟು ಕೊಳ್ಳಲು ಕಾನೂನಿನಲ್ಲಿ ಅವಕಾಶವಿಲ್ಲ‘ ಎಂದು ನ್ಯಾಯಪೀಠ ತಿಳಿಸಿದೆ.

ಪ್ರಕರಣವೇನು?: 

ಪಡೆದ ಸಾಲಕ್ಕೆ ಮಾಡಿಕೊಂಡಿದ್ದ ಭದ್ರತಾ ಒಪ್ಪಂದ ಮತ್ತು ಈ ಕುರಿತಂತೆ 1999ರಿಂದ ಮುಂದುವರಿದಿದ್ದ ತಕರಾರುಗಳ ಅನುಸಾರ ವ್ಯಾಜ್ಯ ಡಿಆರ್‌ಟಿ ಮೆಟ್ಟಿಲೇರಿತ್ತು. ವ್ಯಾಜ್ಯದ ಅವಧಿಯಲ್ಲಿ ಕಸ್ಲಿವಾಲಾ 2016ರ ಏಪ್ರಿಲ್ 5ರಂದು ತಮ್ಮ ಪಾಸ್‌ಪೋರ್ಟ್‌ ಅನ್ನು ಡಿಆರ್‌ಟಿ ವಶಕ್ಕೆ ಒಪ್ಪಿಸಿದ್ದರು. 2016ರ ಡಿಸೆಂಬರ್ 2ರಂದು ಡಿಆರ್‌ಟಿಗೆ ಅರ್ಜಿಯೊಂದನ್ನು ಸಲ್ಲಿಸಿ ಪಾಸ್‌ಪೋರ್ಟ್ ಬಿಡುಗಡೆ ಮಾಡುವಂತೆ ಕೋರಿದ್ದರು. ಆದರೆ, ಡಿಆರ್‌ಟಿ ಈ ಅರ್ಜಿಯನ್ನು ಪರಿಗಣಿಸಿರಲಿಲ್ಲ. ಇದನ್ನು ಪ್ರಶ್ನಿಸಿ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT