ಸೋಮವಾರ, 27 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹3 ಕೋಟಿ ವೆಚ್ಚದಲ್ಲಿ ಪೆನ್‌ಡ್ರೈವ್‌ ಖರೀದಿ: ಜಿ.ಟಿ.ದೇವೇಗೌಡ

ಜೆಡಿಎಸ್‌ ಪ್ರತಿಭಟನಾ ಮೆರವಣಿಗೆ, ರಸ್ತೆ ತಡೆ
Published 9 ಮೇ 2024, 0:25 IST
Last Updated 9 ಮೇ 2024, 0:25 IST
ಅಕ್ಷರ ಗಾತ್ರ

ಮೈಸೂರು: ‘ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಪೆನ್‌ಡ್ರೈವ್‌ ಪ್ರಕರಣ ಅಂತರರಾಷ್ಟ್ರೀಯ ಮಟ್ಟದ ಜಾಲ ಹೊಂದಿದೆ. ಚೆನ್ನೈನ ಕಂಪನಿಯೊಂದರಿಂದ ₹3 ಕೋಟಿ ವೆಚ್ಚದ ಪೆನ್‌ಡ್ರೈವ್‌ ಖರೀದಿಸಿ, ಮಲೇಷ್ಯಾಕ್ಕೆ ತೆರಳಿ ಅಲ್ಲಿನ ಲ್ಯಾಬೊರೇಟರಿಯಲ್ಲಿ ವಿಡಿಯೊ ಕಾಪಿ ತಯಾರಿಸಿ, ವ್ಯವಸ್ಥಿತವಾಗಿ ಪಿತೂರಿ ನಡೆಸಿ ಹಂಚಿದ್ದಾರೆ’ ಎಂದು ಜೆಡಿಎಸ್‌ ಕೋರ್‌ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡ ಆರೋಪಿಸಿದರು.

‘ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು’ ಎಂದು ಆಗ್ರಹಿಸಿ ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಬುಧವಾರ ಜೆಡಿಎಸ್‌ ಏರ್ಪಡಿಸಿದ್ದ ಪ್ರತಿಭಟನೆಯಲ್ಲಿ ಮಾತನಾಡಿ, ‘ಪ್ರಕರಣದ ಬೇರು ಇತರೆ ರಾಜ್ಯಕ್ಕೂ ಹಬ್ಬಿದೆ’ ಎಂದು ಪ್ರತಿಪಾದಿಸಿದರು.

ಆಕ್ರೋಶ: ಪ್ರತಿಭಟನೆಯಲ್ಲಿ ಪಾಲ್ಗೊಂಡ ಜೆಡಿಎಸ್‌ ಶಾಸಕರು, ಮುಖಂಡರು ಹಾಗೂ ನೂರಾರು ಕಾರ್ಯಕರ್ತರು, ರಾಜ್ಯ ಸರ್ಕಾರ ಹಾಗೂ ಎಸ್‌ಐಟಿ ‌ವಿರುದ್ಧ ಘೋಷಣೆ ಕೂಗಿದರು. ತಲೆಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಮೆರವಣಿಗೆ ನಡೆಸಿದರು.

‘ಎಸ್‌ಐಟಿ ತನಿಖೆ ಬೇಡ’, ‘ಮಹಿಳೆಯರ ತೇಜೋವಧೆ ಮಾಡಿ ಪೆನ್‌ಡ್ರೈವ್‌ ವಿತರಿಸಿದವರನ್ನು ಬಂಧಿಸಿ’, ‘ಪೆನ್‌ಡ್ರೈವ್‌ ವಿತರಿಸಿದವರ ವಿರುದ್ಧ ನ್ಯಾಯಾಂಗ ತನಿಖೆಯಾಗಲಿ’, ‘ನೀವು ರಾಜಕಾರಣ ಮಾಡಿ, ನಿಮ್ಮ ರಾಜಕಾರಣದಲ್ಲಿ ಹೆಣ್ಣು ಮಕ್ಕಳನ್ನು ಬೀದಿಗೆ ತರಬೇಡಿ’ ಎಂಬ ಬರಹವುಳ್ಳ ಫಲಕಗಳನ್ನು ಪ್ರದರ್ಶಿಸಿದರು. ಜಿಲ್ಲಾಧಿಕಾರಿ ಕಚೇರಿ ಮುಂಭಾಗ ರಸ್ತೆ ತಡೆ ನಡೆಸಿದರು. 

ಶಾಸಕರಾದ ಜಿ.ಡಿ.ಹರೀಶ್‌ಗೌಡ, ಸಿ.ಎನ್‌.ಮಂಜೇಗೌಡ, ಜೆಡಿಎಸ್‌ ಕಾರ್ಯಾಧ್ಯಕ್ಷ ಸಾ.ರ.ಮಹೇಶ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT