ಬೆಂಗಳೂರು: ‘ಶಾದಿಭಾಗ್ಯ ಯೋಜನೆಗೆ ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀಡಿದ್ದ ₹55 ಕೋಟಿ ಅನುದಾನವನ್ನು ಮುಂದುವರಿಸಿದ್ದೇನೆ ವಿನಾ ಅನುದಾನ ಕಡಿತ ಮಾಡಿಲ್ಲ’ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದರು.

‘ತಪ್ಪು ಮಾಡದ ನನ್ನ ಮೇಲೆ ವಿನಾಕರಣ ತಪ್ಪು ಆರೋಪ ಹೊರಿಸುವ ಪ್ರಯತ್ನ ನಡೆಯುತ್ತಿದೆ. ನಾನು ಯಾವುದೇ ತಪ್ಪು ಮಾಡಿಲ್ಲ. ಆದ ಕಾರಣದಿಂದಲೇ ದೇವರ ಅನುಗ್ರಹದಿಂದ ಈ ಸ್ಥಾನ ಸಿಕ್ಕಿದೆ. ಯಾವುದೇ ಮುಖ್ಯಮಂತ್ರಿ ಸಾಮಾನ್ಯ ಜನರೊಂದಿಗೆ ಬೆರೆಯುವುದಿಲ್ಲ. ಆದರೆ, ನಾನು ಯಾವುದೇ ಜಾತಿ ಭೇದವಿಲ್ಲದೇ ಎಲ್ಲಾ ವರ್ಗದ ಜನರೊಂದಿಗೆ ಬೆರೆಯುತ್ತೇನೆ’ ಎಂದರು.

‘ಶಾದಿ ಭಾಗ್ಯಕ್ಕೆ ಅನುದಾನ ಕಡಿತ’ ಕುರಿತು ಪ್ರತಿಕ್ರಿಯಿಸಿದ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್, ‘ಅನುದಾನ ಕಡಿತ ಮಾಡಿರಲಿಕ್ಕಿಲ್ಲ. ರೈತರ ಸಾಲಮನ್ನಾ ಮಾಡಲು ಬೃಹತ್ ಮೊತ್ತದ ಸಂಪನ್ಮೂಲ ಬೇಕು. ಅದಕ್ಕಾಗಿ ಮರು ಹೊಂದಾಣಿಕೆ ಮಾಡಿರಬಹುದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.