ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಲಿತರನ್ನು ತುಳಿದ ಸಿದ್ದರಾಮಯ್ಯ: ಅಶೋಕ

Published 3 ಏಪ್ರಿಲ್ 2024, 18:39 IST
Last Updated 3 ಏಪ್ರಿಲ್ 2024, 18:39 IST
ಅಕ್ಷರ ಗಾತ್ರ

ಬೆಂಗಳೂರು: ‘ಕಾಂಗ್ರೆಸ್‌ನಲ್ಲಿ ದಲಿತ ನಾಯಕರನ್ನು ಬೆಳೆಯಲು ಬಿಡದೇ ಹಂತ– ಹಂತವಾಗಿ  ತುಳಿದವರು ಸಿದ್ದರಾಮಯ್ಯ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ ಆರೋಪಿಸಿದ್ದಾರೆ.

‘ಆದರೆ ನೀವು ದಲಿತರ ಪರ ಮೊಸಳೆ ಕಣ್ಣೀರು ಸುರಿಸಿ, ಬಿಜೆಪಿ ಮೇಲೆ ಗೂಬೆ ಕೂರಿಸಿದರೆ ದಲಿತರ ಚಾಂಪಿಯನ್‌ ಆಗಿ ಬಿಡಬಹುದು ಎಂದು ಭಾವಿಸಿದ್ದೀರಿ. ದಲಿತರಿಗೆ ನಿಮ್ಮ ನಿಜ ಬಣ್ಣ ಗೊತ್ತಾಗಿದೆ. ಅಹಿಂದದಲ್ಲಿ ನಿಮಗೆ ಉಳಿದಿರುವುದು ‘ಅ’ ಮಾತ್ರ’ ಎಂದು ಅವರು ಕಿಡಿಕಾರಿದ್ದಾರೆ.

‘2013ರಲ್ಲಿ ಜಿ.ಪರಮೇಶ್ವರ ಮುಖ್ಯಮಂತ್ರಿ ಆಗದಂತೆ ತಡೆಯಲು ಅವರ ಬೆನ್ನಿಗೆ ಚೂರಿ ಹಾಕಿ ಚುನಾವಣೆಯಲ್ಲಿ ಸೋಲಿಸಿದ್ದು ಯಾರು? ಮಲ್ಲಿಕಾರ್ಜುನ ಖರ್ಗೆ ಅವರನ್ನು ದೆಹಲಿಗೆ ಕಳುಹಿಸಿ ಮೂಲೆ ಗುಂಪು ಮಾಡುವ ಕುತಂತ್ರ ಮಾಡಿದ್ದು ಯಾರು? ತೀರಾ ಇತ್ತೀಚೆಗೆ ಕೆ.ಎಚ್‌.ಮುನಿಯಪ್ಪ ಅವರ ಕುಟುಂಬಕ್ಕೆ ಕೋಲಾರ ಲೋಕಸಭಾ ಟಿಕೆಟ್‌ ತಪ್ಪಿಸಿದ್ದು ಯಾರ ಶಿಷ್ಯರು’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT