ಕಲಬುರಗಿ ಜಿಲ್ಲೆಯ ಹಾಗರಗುಂಡಗಿಯಲ್ಲಿ 1938ರಲ್ಲಿ ಜನಿಸಿದ್ದ ಕಾಂತಾ ಅವರು ಬಡತನದ ಕಾರಣಕ್ಕೆ ಶಾಲೆ ತೊರೆದು ಜವಳಿ ಕಾರ್ಖಾನೆಯಲ್ಲಿ ಕಾರ್ಮಿಕರಾಗಿ ಕೆಲಸ ಮಾಡಿದ್ದರು. ಶೋಷಿತರು, ಕೂಲಿ ಕಾರ್ಮಿಕರ ಪರವಾಗಿ ಹಲವು ಹೋರಾಟ ನಡೆಸಿದ್ದಾರೆ. 1967ರಲ್ಲಿ ಪ್ರಜಾ ಸೋಷಲಿಸ್ಟ್ ಪಕ್ಷ ಸೇರಿ ರಾಜಕೀಯ ಕ್ಷೇತ್ರಕ್ಕೆ ಬಂದರು. 1986ರಲ್ಲಿ ಕಾರ್ಮಿಕ ಸಚಿವರಾದರು. ಶಾಸಕ, ಸಚಿವರಾಗಿದ್ದ ಅವರು ಇಂದಿಗೂ ಬಾಡಿಗೆ ಮನೆಯಲ್ಲೇ ವಾಸಿಸುತ್ತಿದ್ದಾರೆ. ಅವರನ್ನು ಆಯ್ಕೆ ಮಾಡಿರುವುದು ಪ್ರಶಸ್ತಿಯ ಮೌಲ್ಯ ಹೆಚ್ಚಿಸಿದೆ ಎಂದು ಹೇಳಿದರು.