ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್ಸೆಸ್ಸೆಲ್ಸಿ ಪರೀಕ್ಷೆ: ಪ್ರಥಮ ಸ್ಥಾನ ಪಡೆದ ಸೃಜನಾ ಮಾತು

Last Updated 30 ಏಪ್ರಿಲ್ 2019, 11:07 IST
ಅಕ್ಷರ ಗಾತ್ರ

ಆನೇಕಲ್: ತಾಲ್ಲೂಕಿನ ಅತ್ತಿಬೆಲೆಯ ಸೆಂಟ್‌ ಫಿಲೋಮಿನಾ ಶಾಲೆಯ ವಿದ್ಯಾರ್ಥಿನಿ ಡಿ.ಸೃಜನಾ ಎಸ್ಸೆಸ್ಸೆಲ್ಸಿಪರೀಕ್ಷೆಯಲ್ಲಿ 625ಕ್ಕೆ 625 ಅಂಕಗಳನ್ನು ಗಳಿಸಿ ರಾಜ್ಯಕ್ಕೆ ಪ್ರಥಮ ಸ್ಥಾನಗಳಿಸಿದ್ದಾಳೆ.

‘ಸತತ ಪರಿಶ್ರಮ ಹಾಗೂ ಅಧ್ಯಯನ ಯಶಸ್ಸಿನ ಗುಟ್ಟು’ ಎಂದು ಹೇಳಿದ ಸೃಜನಾ,ವರ್ಷದಿಂದ ಟಿವಿ, ಮೊಬೈಲ್‌ಗಳುಇನ್ಯಾಕ್ಟಿವ್‌ ಆಗಿದ್ದವು. ಅಧ್ಯಯನಮಾತ್ರ ಆಕ್ಟಿವ್ ಆಗಿತ್ತು ಎನ್ನುತ್ತಾಳೆ.

ಮನೆಯಲ್ಲಿ ಟಿವಿ, ಸಿನೆಮಾ ನೋಡಲು ಅಥವಾ ಪಠ್ಯೇತರಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಅವಕಾಶ ಕೊಡುತ್ತಿರಲಿಲ್ಲ. ಸದಾ ಓದು, ವಿಶ್ರಾಂತಿ, ಓದು,.. ಇದು ಒಂದು ವರ್ಷದಿಂದಲೂ ನನ್ನ ಜೀವನ ಶೈಲಿಯಾಗಿತ್ತು. ತಂದೆವಿಜ್ಞಾನ ಶಿಕ್ಷಕರಾಗಿದ್ದು, ವಿಜ್ಞಾನ ವಿಷಯವನ್ನುಅವರೇಹೇಳಿಕೊಡುತ್ತಿದ್ದರು. ತಂದೆಯ ಸ್ನೇಹಿತ ಸೋಮಶೇಖರ್‌ಗಣಿತ ವಿಷಯಹೇಳಿಕೊಟ್ಟಿದ್ದರು. ಇವರು ಹಾಗೂ ಶಾಲೆಯ ಶಿಕ್ಷಕರು ಹಾಗೂ ಆಡಳಿತ ಮಂಡಳಿಯ ಪ್ರೋತ್ಸಾಹದಿಂದ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆಯುವ ಸಾಧನೆ ಮಾಡಲು ಸಾಧ್ಯವಾಯಿತು ಎಂದು ಯಶಸ್ಸಿನ ಹಿನ್ನೆಲೆ ತೆರೆದಿಟ್ಟಿದ್ದಾಳೆ.

ಸೃಜನಾಳನ್ನು ಆಡಳಿತ ಮಂಡಳಿಯಿಂದ ಪ್ರಾಚಾರ್ಯ ಸುರೇಶ್ ಅಭಿನಂದಿಸಿದರು
ಸೃಜನಾಳನ್ನು ಆಡಳಿತ ಮಂಡಳಿಯಿಂದ ಪ್ರಾಚಾರ್ಯ ಸುರೇಶ್ ಅಭಿನಂದಿಸಿದರು

ತಂದೆ ಹಾಗೂ ತಾಯಿಆಶಯದಂತೆ ವೈದ್ಯೆಯಾಗಬೇಕೆಂಬ ಹಂಬಲವಿದೆ. ಅದನ್ನು ಸಾಧಿಸಲು ಶ್ರಮಿಸುವೆ ಎಂದು ಮುಂದಿನ ಯೋಜನೆಯನ್ನು ಸೃಜನಾ ವ್ಯಕ್ತಪಡಿಸಿದಳು.

ಸೃಜನಾತಂದೆ ದಿವಾಕರ್ ಮಾತನಾಡಿ, ‘ನಮ್ಮದು ಶಿಕ್ಷಕರಕುಟುಂಬ ನಮ್ಮ ತಂದೆ ಎ.ಕೆ.ನಾಗರಾಜು ಜಯಭಾರತಿ ಪ್ರೌಢ ಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿದ್ದರು. ನಾನು ಸಹ ಶಿಕ್ಷಕನಾಗಿದ್ದೇನೆ. ಮಗಳುಕಟ್ಟುನಿಟ್ಟಿನಿಂದ ಅಧ್ಯಯನದ ಕಡೆ ಗಮನ ಹರಿಸುವಂತೆ ಮಾಡಿದೆ. ಸೃಜನಾಪ್ರಥಮ ಸ್ಥಾನಗಳಿಸುತ್ತಾಳೆಎಂದುನನ್ನಮಿತ್ರ ಸೋಮಶೇಖರ್ ಹಲವು ಬಾರಿ ವಿಶ್ವಾಸದಿಂದ ಹೇಳುತ್ತಿದ್ದರು. ಆದರೆ ನಾವು ನಂಬಿರಲಿಲ್ಲ. ಅವರ ಭರವಸೆ ನಿಜವಾಗಿದೆ’ ಎಂದು ಸಂತಸ ವ್ಯಕ್ತಪಡಿಸಿದರು.

ಗಣಿತ ಶಿಕ್ಷಕ ಸೋಮಶೇಖರ್ ಮಾತನಾಡಿ, ಎಲ್‌ಕೆಜಿಯಿಂದಲೂ ಎಲ್ಲತರಗತಿಗಳಲ್ಲೂ ಪೂರ್ಣಾಂಕಗಳನ್ನು ಗಳಿಸಿದ ಹೆಗ್ಗಳಿಕೆ ಸೃಜನಾಳದು. ಎಸ್ಸೆಸ್ಸೆಲ್ಸಿಯಲ್ಲಿಟೆಸ್ಟ್‌ಗಳು, ಪೂರ್ವಸಿದ್ಧತಾ ಪರೀಕ್ಷೆ ಸೇರಿದಂತೆ ಎಲ್ಲಾ ಪರೀಕ್ಷೆಗಳಲ್ಲೂ 100ಕ್ಕೆ 100 ಅಂಕಗಳಿಸುತ್ತಿದ್ದನ್ನು ನೋಡಿದ್ದೆ. ಹಾಗಾಗಿ ಉನ್ನತ ಸ್ಥಾನ ಗಳಿಸುವ ಭರವಸೆ ನೀಡಿದ್ದೆ ಎಂದರು.

ಶಾಲೆಯ ಪ್ರಾಚಾರ್ಯ ಸುರೇಶ್ ಮಾತನಾಡಿ, ಸೃಜನಾ ಉತ್ತಮ ವಿದ್ಯಾರ್ಥಿನಿ ಎಂದು ಶಿಕ್ಷಕರು ಗುರುತಿಸಿದ್ದರು. ತಾಲ್ಲೂಕಿಗೆ ಪ್ರಥಮ ಸ್ಥಾನ ಪಡೆಯುವಳೆಂದು ನಂಬಿದ್ದೆ. ಆದರೆ, ರಾಜ್ಯಕ್ಕೆ ಪ್ರಥಮ ಸ್ಥಾನ ಬಂದಿರುವುದು ಸಂತಸ ತಂದಿದೆ. ಅತ್ಯಂತ ಶಿಸ್ತು ಹಾಗೂ ಶ್ರದ್ಧೆಯನ್ನು ಹೊಂದಿದ್ದ ಸೃಜನಾ ಪ್ರಥಮ ಸ್ಥಾನ ಪಡೆದಿರುವುದು ನಮ್ಮ ಹೆಮ್ಮೆ ಎಂದರು.

ಪ್ರಥಮ ಸ್ಥಾನಗಳಿಸಿರುವಸೃಜನಾ ವ್ಯಾಸಂಗ ಮಾಡಿರುವಸೆಂಟ್‌ ಫಿಲೋಮಿನಾ ಶಾಲೆಯಲ್ಲಿ ಹಬ್ಬದ ವಾತಾವರಣವಿತ್ತು. ಪಟಾಕಿಗಳನ್ನು ಸಿಡಿಸಿ, ಸಿಹಿ ವಿತರಿಸಿ ಸಂಭ್ರಮಿಸಿದರು. ಮಾಧ್ಯಮಗಳೊಂದಿಗೆಆತ್ಮವಿಶ್ವಾಸದಿಂದ ತಮ್ಮ ಅನುಭವಗಳನ್ನು ಸೃಜನಾ ಹಂಚಿಕೊಂಡಳು.

ಅತ್ತಿಬೆಲೆಯ ಖಾಸಗಿ ಶಾಲೆಯ ವಿಜ್ಞಾನ ಶಿಕ್ಷಕ ದಿವಾಕರ್ ಹಾಗೂ ಗೃಹಿಣಿ ವೀಣಾ ದಂಪತಿಯ ಇಬ್ಬರು ಹೆಣ್ಣು ಮಕ್ಕಳಲ್ಲಿ ಡಿ.ಸೃಜನಾ ಹಿರಿಯಳು. ಮತ್ತೊಬ್ಬ ಮಗಳು ಡಿ.ಸಿಂಚನಾ ಸಹ ಅತ್ತಿಬೆಲೆಯ ಸೆಂಟ್ ಫಿಲೋಮಿನಾ ಶಾಲೆಯಲ್ಲಿ 6ನೇ ತರಗತಿ ವ್ಯಾಸಂಗ ಮಾಡುತ್ತಿದ್ದಾಳೆ.

ಎಸ್ಸೆಸ್ಸೆಲ್ಸಿ ಫಲಿತಾಂಶ:http://sslc.kar.nic.inಮತ್ತುhttp://karresults.nic.inವೆಬ್‌ಸೈಟ್‌ನಲ್ಲಿ ಫಲಿತಾಂಶ ಪಡೆಯಬಹುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT