ಬೆಂಗಳೂರು: ‘ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರದ್ದುಗೊಳಿಸಿ ರಾಜ್ಯಕ್ಕೆ ಅನುಕೂಲವಾಗುವ ಶಿಕ್ಷಣ ನೀತಿಯನ್ನು ಶೀಘ್ರವೇ ರೂಪಿಸಲಾಗುವುದು’ ಎಂದು ಗೃಹ ಸಚಿವ ಜಿ. ಪರಮೇಶ್ವರ್ ಹೇಳಿದರು.

ನಗರದಲ್ಲಿ ಮಂಗಳವಾರ ಆಯೋಜಿಸಿದ್ದ ಆಚಾರ್ಯ ಪಾಠಶಾಲಾ ಎಜುಕೇಷನಲ್ ಟ್ರಸ್ಟ್‌ನ ಸಂಸ್ಥಾಪಕರ ದಿನ ಮತ್ತು ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಶಿಕ್ಷಣ ಕ್ಷೇತ್ರದಲ್ಲಿ ಯಾರೂ ಸ್ವಾರ್ಥಿಗಳಾಗಬಾರದು. ತಮ್ಮಲ್ಲಿರುವ ಜ್ಞಾನವನ್ನು ಸಮಾಜಕ್ಕೆ ನೀಡಬೇಕು. ಶಿಕ್ಷಕರು ಬೆಳಗುವ ದೀಪಗಳಾಗಿ, ನಮ್ಮ ಮುಂದಿನ ಜನಾಂಗ ಬೆಳಗುವ ರೀತಿ ಮಾಡಬೇಕು’ ಎಂದರು.

ತುಮಕೂರು ರಾಮಕೃಷ್ಣ ಮಠದ ಸ್ವಾಮಿ ವೀರೇಶಾನಂದ ಸ್ವಾಮೀಜಿ, ಎಪಿಎಸ್ ಎಜ್ಯುಕೇಷನಲ್ ಟ್ರಸ್ಟ್ ಅಧ್ಯಕ್ಷ ವಿಷ್ಣು ಭರತ್ ಅಲಂಪಲ್ಲಿ, ಉಪಾಧ್ಯಕ್ಷರಾದ ಎಸ್.ಸಿ. ಶರ್ಮಾ, ಆರ್. ವಿ. ವಿಜಯ ಭಾಸ್ಕರ್, ಖಜಾಂಚಿ ಕೆ.ಎಸ್. ಅಖಿಲೇಶ್ ಬಾಬು, ಪ್ರಧಾನ ಕಾರ್ಯದರ್ಶಿಗಳಾದ ಎ. ಪ್ರಕಾಶ್, ಪಿ. ಕೃಷ್ಣ ಸ್ವಾಮಿ, ಜಂಟಿ ಕಾರ್ಯದರ್ಶಿಗಳಾದ ಎ. ಆರ್. ಮಂಜುನಾಥ್, ಎಪಿಎಸ್ ಶಿಕ್ಷಣ ಸಂಸ್ಥೆಯ ಟ್ರಸ್ಟಿ ಎ.ಆರ್. ಆಚಾರ್ಯ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.