‘ಯಾವುದನ್ನೂ ಮುಚ್ಚಿಟ್ಟಿಲ್ಲ’
ಚುನಾವಣಾ ಅಫಿಡವಿಟ್‌ನಲ್ಲಿ ನಾನು ಯಾವುದನ್ನೂ ಮುಚ್ಚಿಟ್ಟಿಲ್ಲ. ಅಬಕಾರಿ ವ್ಯವಹಾರದ ಮಾಹಿತಿಯನ್ನೂ ನೀಡಿದ್ದೇನೆ. ಅಂಕಿ ಅಂಶಗಳನ್ನು ಬರೆಯುವಾಗ ಸಣ್ಣ ತಪ್ಪಾಗಿತ್ತು. ಆದರೆ, ಒಟ್ಟಾರೆ ಲೆಕ್ಕ ಸರಿಯಾಗಿತ್ತು. ಸೋತವರು ಈ ರೀತಿ ಬರುವುದು ಸರಿ ಅಲ್ಲ ಎಂದು ನ್ಯಾಯಾಲಯ ಹೇಳಿದೆ ಎಂದು ಕಾಂಗ್ರೆಸ್ ಶಾಸಕ ಎನ್.ಎಸ್.ಸುಬ್ಬಾರೆಡ್ಡಿ ಹೇಳಿದ್ದಾರೆ.