ಶಾಸಕರನ್ನು ಅಮಾನತು ಮಾಡಿ ಷರತ್ತು ವಿಧಿಸಿರುವುದನ್ನು ರದ್ದು ಮಾಡಿದ್ದೇನೆ. ಅಮಾನತುಗೊಂಡವರಿಗೆ ಪರಿಸ್ಥಿತಿ ಗೊತ್ತಾಗಿದೆ. ಮುಂದೆ ಅವರು ಈ ರೀತಿಯ ವರ್ತನೆ ತೋರಿಸುವುದಿಲ್ಲ ಎಂಬ ನಂಬಿಕೆಯಿದೆ.
–ಯು.ಟಿ. ಖಾದರ್ ವಿಧಾನಸಭಾಧ್ಯಕ್ಷ
ವಿಧಾನಸಭೆಗೆ ಆಡಳಿತ ಪಕ್ಷ ಮಾತ್ರವಲ್ಲ ವಿಪಕ್ಷವೂ ಪ್ರಮುಖ. ನಮ್ಮ ಶಾಸಕರು ವಿಷಾದ ವ್ಯಕ್ತಪಡಿಸಿದ್ದಾರೆ. ಅಮಾನತು ಹಿಂಪಡೆಯಬೇಕೆಂಬ ಮನವಿಗೆ ಮುಖ್ಯಮಂತ್ರಿ ಸಭಾಧ್ಯಕ್ಷರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ