ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಕರ ದಿನಾಚರಣೆ ವಿಶೇಷ: ತಪ್ಪದೆ ಓದಬೇಕಾದ 10 ಸುದ್ದಿಗಳು

Last Updated 5 ಸೆಪ್ಟೆಂಬರ್ 2019, 5:49 IST
ಅಕ್ಷರ ಗಾತ್ರ

ಬೆಂಗಳೂರು: ಅಕ್ಷರ ಕಲಿಸಿ, ಬದುಕಿನ ದಾರಿ ತೋರಿದ ಗುರುವಿಗೆ ನಮನ ಸಲ್ಲಿಸಲು ಶಿಕ್ಷಣ ದಿನಾಚರಣೆ ಒಂದು ನೆಪ. ಶಿಕ್ಷಕರ ದಿನಾಚರಣೆ ಹಿನ್ನೆಲೆಯಲ್ಲಿ ಪ್ರಜಾವಾಣಿ ಜಾಲತಾಣದಲ್ಲಿ ಪ್ರಕಟವಾದ, ನೀವು ಮಿಸ್‌ ಮಾಡದೆ ಓದಲೇ ಬೇಕಾದ ಹತ್ತು ಸುದ್ದಿಗಳು ಇಲ್ಲಿವೆ.

‘ಅಕ್ಷರ ದೇಗುಲ’ ಉಳಿಸಲು ಆಡಳಿತ ಮಂಡಳಿ ಪಣ
49 ವರ್ಷಗಳಿಂದ ಊರವರ ಅಚ್ಚುಮೆಚ್ಚಿನ ಶಾಲೆಯಾಗಿದ್ದ ಶಿರಸಿ ತಾಲ್ಲೂಕು ವಾನಳ್ಳಿಯ ಗಜಾನನ ಮಾಧ್ಯಮಿಕ ಶಾಲೆಯನ್ನು ಉಳಿಸಿಕೊಂಡಿದ್ದು ಹೇಗೆ?
https://bit.ly/2Q4fked

ಸಹಸ್ರ ಬುದ್ಧಿ ಹೇಳಿದ ಸಹಸ್ರಬುದ್ದೆ
ಖ್ಯಾತ ವಿಜ್ಞಾನಿ ಸಿ.ಎನ್.ಆರ್. ರಾವ್ ಅವರ ಬದುಕು ಬದಲಿಸಿದ ಅಧ್ಯಾಪಕ ಸಹಸ್ರಬುದ್ಧೆ. ಅವರು ಶಿಫಾರಸು ಮಾಡಿದ ಒಂದು ಪುಸ್ತಕ ಓದಿದ್ದೇ ರಾವ್ ಅವರನ್ನು ಖ್ಯಾತ ವಿಜ್ಞಾನಿಯಾಗಲು ಪ್ರೇರೇಪಿಸಿತಂತೆ!
https://bit.ly/2M1r6Tg

ಬದುಕಿನ ಶಾಲೆಯಲ್ಲಿ ಹಲವು ಗುರುಗಳು
ಪ್ರಾಥಮಿಕ ಶಿಕ್ಷಣದಿಂದ ಕಾಲೇಜು ಜೀವನದವರೆಗಿನ ಎಲ್ಲ ನೆಚ್ಚಿನ ಗುರುಗಳಿಗೂ ನಮನ ಸಲ್ಲಿಸಿದ್ದಾರೆ ಚಿತ್ರನಟ ರಮೇಶ್ ಅರವಿಂದ್.
https://bit.ly/2M1rbGy

ಅರಿವು ಮೂಡಿಸಿದ ಆ್ಯನ್‌ ವಾರಿಯರ್‌
ಇಂಗ್ಲೆಂಡ್‌ ಮೂಲದ ಆ್ಯನ್ ವಾರಿಯರ್ ಬೆಂಗಳೂರಿನ ಬಿಷಪ್‌ ಕಾಟನ್‌ ಬಾಲಕಿಯರ ಪ್ರೌಢಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸಿದವರು. ಕಿರಣ್‌ ಮಜುಂದಾರ್‌ ಷಾ ಅವರಲ್ಲಿದ್ದ ಉದ್ಯಮಿಯನ್ನು ಅನಾವರಣಗೊಳಿಸಿದವರು. ಮಜುಂದಾರ್ ಷಾ ತಮ್ಮ ನೆಚ್ಚಿನ ಶಿಕ್ಷಕಿಗೆ ನಮನ ಸಲ್ಲಿಸಿದ್ದಾರೆ.
https://bit.ly/2LX6bRj

ಕಲಿಕೆಗೆ ತುಡಿಯುವ ಮನೋಭಾವ...
ಸರ್ಕಾರಿ ಮತ್ತು ಖಾಸಗಿ ಶಾಲೆಗಳ ಶಿಕ್ಷಕರ ವೃತ್ತಿ ಭದ್ರತೆ, ಸವಾಲುಗಳು, ಆತಂಕ, ತಮುಲಗಳನ್ನು ಲೇಖನವೊಂದರಲ್ಲಿ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ ಡಾ.ಎಚ್.ಬಿ. ಚಂದ್ರಶೇಖರ್.
https://bit.ly/2PBzwTN

ವಿದ್ಯಾರ್ಥಿಗಳ ಮೆಚ್ಚಿನ ಮೇಷ್ಟ್ರು ‘ಹುಲ್ಲೂರ ಕಾಕಾ’
ವಿದ್ಯಾರ್ಥಿಗಳಿಗಾಗಿ ಜೀವನವನ್ನೇ ಮುಡುಪಾಗಿಟ್ಟವರು ವಿಜಯಪುರ ಜಿಲ್ಲೆ ತಾಳಿಕೋಟೆ ತಾಲ್ಲೂಕು ಮಿಣಜಗಿ ಸರ್ಕಾರಿ ಶಾಲೆಯ ಮುಖ್ಯಶಿಕ್ಷಕ ಮಹಾದೇವಪ್ಪ ಸಂಗಪ್ಪ ಹುಲ್ಲೂರ. ದಣಿವರಿಯದ ಸೇವೆಯ ಚಿತ್ರಣ ಇಲ್ಲಿದೆ.
https://bit.ly/2wK1GnT

ಸ್ವಂತ ಖರ್ಚಿನಲ್ಲಿ ಗ್ರಂಥಾಲಯ ತೆರೆದ ಮೇಷ್ಟ್ರು
ಹೊಸಪೇಟೆಯ ಕಾರಿಗನೂರು ಸರ್ಕಾರಿ ಪ್ರೌಢಶಾಲೆಯ ಇಂಗ್ಲಿಷ್‌ ಶಿಕ್ಷಕ ಬಿ. ಸೈಯದ್‌ ಹುಸೇನ್‌ ಅವರಿಗೆ ಈ ಬಾರಿ ರಾಜ್ಯಮಟ್ಟದ ಶಿಕ್ಷಕ ಪ್ರಶಸ್ತಿ ದೊರೆತಿದೆ. ಸ್ವಂತ ಖರ್ಚಿನಲ್ಲಿ ಮನೆಯಲ್ಲೇ ಗ್ರಂಥಾಲಯ ತೆರೆದು ವಿದ್ಯಾರ್ಥಿಪ್ರೀತಿ ತೋರುತ್ತಿರುವ ಸೈಯದ್, ಓದಿನಲ್ಲಿ ಹಿಂದಿರುವ ಮಕ್ಕಳಿಗೆ ಉಚಿತ ತರಗತಿಗಳನ್ನೂ ಆಯೋಜಿಸುತ್ತಾರೆ.
https://bit.ly/2NPZzpC

ಪತಿ–ಪತ್ನಿ ಶಿಕ್ಷಕರಾಗಿರುವ ಮಾದರಿ ಶಾಲೆ..!
ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲ್ಲೂಕು ಮುದ್ನಾಳ ತಾಂಡಾದ ಬಹುತೇಕ ಜನರು ಉದ್ಯೋಗ ನಿಮಿತ್ತ ಗೋವಾದಲ್ಲಿದ್ದಾರೆ. ಅಜ್ಜ–ಅಜ್ಜಿಯರ ಆಸೆಯಲ್ಲಿರುವ ಮಕ್ಕಳಿಗೆ ತಂದೆ–ತಾಯಿಯ ಕೊರತೆಯೇ ಕಾಡದಂತೆ ಪ್ರೀತಿಯಿಂದ ಶಿಕ್ಷಣ ನೀಡುತ್ತಿದ್ದಾರೆ ಮಹಾಂತೇಶ ಕೃಷ್ಣಪ್ಪ ಪೂಜಾರಿ ಮತ್ತು ಅವರ ಪತ್ನಿ ಶ್ರೀದೇವಿ ಶಿವಣ್ಣ ಗುಡದಿನ್ನಿ.
https://bit.ly/2Q4fTVn

ಯಾವ ಖಾಸಗಿ ಶಾಲೆಗೂ ಕಮ್ಮಿ ಇಲ್ಲ ಈ ಶಾಲೆ
ಕಾನ್ವೆಂಟ್‌ಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳು ಸರ್ಕಾರಿ ಶಾಲೆಗೆ ಸೇರುವುದನ್ನು ಕೇಳಿದ್ದೀರಾ? ಗುಂಡ್ಲುಪೇಟೆ ತಾಲ್ಲೂಕಿನ ಹೊಂಗಳ್ಳಿ ಗ್ರಾಮದಲ್ಲಿ ಇದು ಸಾಧ್ಯವಾಗಿದೆ. ಅದು ಹೇಗೆ ಎಂದು ಅರ್ಥವಾಗಲು ನೀವು ಈ ಸ್ಟೋರಿ ಓದಬೇಕು.
https://bit.ly/2wIHgfQ

ವೃತ್ತಿಯಿಂದ ರೈತ, ಪ್ರವೃತ್ತಿಯಿಂದ ಶಿಕ್ಷಕ...
ಕೃಷಿ ಕಾಯಕವಾಗಿದ್ದರೂ ಪ್ರವೃತ್ತಿಯಿಂದ ಶಿಕ್ಷಕನಾಗಿ ಅದೆಷ್ಟೋ ವಿದ್ಯಾರ್ಥಿಗಳ ಪಾಲಿನ ಬೆಳಕಾಗಿದ್ದಾರೆ ಧಾರವಾಡ ತಾಲ್ಲೂಕಿನ ಕರಡಿಗುಡ್ಡ ಗ್ರಾಮದ ಶಿಕ್ಷಕ ವಿರೂಪಾಕ್ಷಪ್ಪ ಕೋಟೂರು. ಗ್ರಾಮೀಣ ಪ್ರದೇಶದ ಮಕ್ಕಳಲ್ಲಿ ಇಂಗ್ಲಿಷ್ ಭಯ ತೊಲಗಿಸಿದ ಹೆಗ್ಗಳಿಕೆ ಇವರದ್ದು.
https://bit.ly/2MKYvXL

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT