ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಥಲಸ್ಸೆಮಿಯಾ ರೋಗಕ್ಕೆ ಸಿಗದ ಔಷಧ: ಹೈಕೋರ್ಟ್‌ನಲ್ಲಿ ಪಿಐಎಲ್‌

Last Updated 22 ಸೆಪ್ಟೆಂಬರ್ 2021, 3:26 IST
ಅಕ್ಷರ ಗಾತ್ರ

ಬೆಂಗಳೂರು:ಥಲಸ್ಸೆಮಿಯಾ ರೋಗಿಗಳಿಗೆ ಜೀವ ರಕ್ಷಕವಾಗಿರುವ ‘ಚೆಲೇಷನ್’ ಔಷಧವನ್ನು ಉಚಿತವಾಗಿ ಪೂರೈಸಲು ನಿರ್ದೇಶನ ನೀಡುವಂತೆ ಕೋರಿ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಆಧರಿಸಿ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್‌ ನೀಡಿದೆ.

ಥಲಸ್ಸೆಮಿಯಾ ಎಂಬುದು ರಕ್ತ ಪರಿಚಲನೆ ಸಮಸ್ಯೆಯಿಂದ ಉಂಟಾಗುವ ಅಂಗವೈಕಲ್ಯವಾಗಿದ್ದು, ಇದಕ್ಕೆ ಅಗತ್ಯವಾಗಿ ಬೇಕಿರುವ ‘ಚೆಲೇಷನ್’ ಎಂಬ ಔಷಧ ಸರ್ಕಾರಿ ಆಸ್ಪತ್ರೆಗಳಲ್ಲಿ ಲಭ್ಯವಿಲ್ಲದೆ ರೋಗಿಗಳು ಪರದಾಡುತ್ತಿದ್ದಾರೆ.

‘ರೋಗಿಗಳಿಗೆ ಪದೇ ಪದೇ ರಕ್ತ ಬದಲಾವಣೆ ಮಾಡಬೇಕಾಗುತ್ತದೆ. ಪುನರಾವರ್ತಿತ ರಕ್ತ ಬದಲಾವಣೆಯಿಂದ ರಕ್ತದಲ್ಲಿ ಕಬ್ಬಿಣದ ಅಂಶ ಸಂಗ್ರಹವಾಗುತ್ತದೆ. ಆ ಹೆಚ್ಚುವರಿ ಕಬ್ಬಿಣದ ಅಂಶವನ್ನು ದೇಹದಿಂದ ಹೊರ ಹಾಕುವ ಕೆಲಸವನ್ನು ಈ ‘ಚೆಲೇಷನ್’ ಎಂಬ ದುಬಾರಿ ಔಷಧ ಮಾಡುತ್ತದೆ’ ಎಂದು ಅರ್ಜಿದಾರರು ತಿಳಿಸಿದ್ದಾರೆ.

‘ಈ ಔಷಧ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಲಭ್ಯವಿತ್ತು. ಈಗ ಪೂರೈಕೆ ನಿಲ್ಲಿಸಲಾಗಿದ್ದು, ಕೋವಿಡ್‌ ಆರಂಭವಾದ ನಂತರ ಈ ಔಷಧ ತರಿಸಲು ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ರಾಜ್ಯದಲ್ಲಿ ಸುಮಾರು 17 ಸಾವಿರ ರೋಗಿಗಳಿದ್ದು, ಔಷಧ ಉಚಿತವಾಗಿ ಸಿಗದೆ ತೊಂದರೆ ಅನುಭವಿಸುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಈ ಔಷಧದ ಬೆಲೆ ₹1,000 ದಿಂದ ₹1,500 ಇದೆ’ ಎಂದು ವಿವರಿಸಿದ್ದಾರೆ.

‘ಎಲ್ಲ ರೋಗಿಗಳಿಗೂ ಉಚಿತವಾಗಿ ಔಷಧ ಪೂರೈಸಬೇಕು ಮತ್ತು ಅಂಗವಿಕಲ ಪ್ರಮಾಣ ಪತ್ರ ವಿತರಿಸಲು ನಿರ್ದೇಶನ ನೀಡಬೇಕು’ ಎಂದು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT