ಬೆಂಗಳೂರು: ಹೊಸ ಕೇಸುಗಳನ್ನು ಖುದ್ದು ಹಾಜರಾಗಿ ದಾಖಲಿಸಲು ವಕೀಲರು, ಸ್ವತಃ ವಾದ ಮಂಡಿಸುವವರು ಇಲ್ಲವೇ ವಕೀಲರ ಸಹಾಯಕರಿಗೆ ಬೆಂಗಳೂರು ಪ್ರಧಾನ ಪೀಠದಲ್ಲಿ ಮೂರು ದಿನಗಳ ಪ್ರಾಯೋಗಿಕ ಅವಕಾಶ ಕಲ್ಪಿಸಲಾಗಿದೆ.
ಇದೇ 13, 14 ಮತ್ತು 15ರಂದು ಇದಕ್ಕೆ ಅವಕಾಶ ಇದೆ. ಈ ಕುರಿತಂತೆ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಸೋಮವಾರ ಪ್ರಕಟಣೆ ಹೊರಡಿಸಿದ್ದಾರೆ.
ಕೇಸು ದಾಖಲಿಸಲು hck-filing@hck.gov.in ವೆಬ್ಸೈಟ್ ಮುಖಾಂತರ ಅರ್ಜಿ ಪಡೆಯಬಹುದು.
ವಕೀಲರು ಖುದ್ದು ಕೋರ್ಟ್ಗೆ ತೆರಳಿ ಅರ್ಜಿ ದಾಖಲಿಸುವ ಪ್ರಕ್ರಿಯೆ ಲಾಕ್ಡೌನ್ ಕಾರಣ ಸ್ಥಗಿತಗೊಂಡಿತ್ತು.