ಜಗಳೂರು: ತಾಲ್ಲೂಕಿನ ಹಾಲೇಹಳ್ಳಿ, ಹುಚ್ಚವ್ವನಹಳ್ಳಿ, ಕೊರಚರಹಟ್ಟಿ ಆಸುಪಾಸಿನ ರೈತರು ತೈವಾನ್ ಕೊಹಿನೂರ್ ತಳಿಯ ಕರಬೂಜ ಬೆಳೆದಿದ್ದು, ದೆಹಲಿ, ಮುಂಬೈ ಮಾರುಕಟ್ಟೆಗೆ ಸಾಗಿಸಲು ಸಾಧ್ಯವಾಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ.

ತಾಲ್ಲೂಕಿನ ಹಾಲೇಹಳ್ಳಿ ಗ್ರಾಮದ ಅಮರೇಂದ್ರಪ್ಪ ಎರಡೂವರೆ ಎಕರೆಯಲ್ಲಿ ಹಾಗೂ ಕೇಶವರೆಡ್ಡಿ ಮೂರೂವರೆ ಎಕರೆಯಲ್ಲಿ ಈ ತಳಿಯ ಕರಬೂಜ ಬೆಳೆದಿದ್ದಾರೆ.

ಪೌಜಾ ಮತ್ತು ಸನ್ ರೈಸ್ ತಳಿಯ ಕರಬೂಜ ಬೀಜಕ್ಕೆ ಪ್ರತಿ ಕೆ.ಜಿಗೆ ಕೇವಲ ₹ 5 ಸಾವಿರದಿಂದ ₹ 6 ಸಾವಿರ ದರವಿದೆ. ಆದರೆ ತೈವಾನ್ ಕೊಹಿನೂರ್ ತಳಿಯ ಬೀಜಕ್ಕೇ ಪ್ರತಿ ಕೆ.ಜಿಗೆ ₹ 80 ಸಾವಿರ ದರ ಇದೆ.

‘ಸುಮಾರು ಮೂರು ಲಕ್ಷ ವೆಚ್ಚವಾಗಿದೆ. 40 ಟನ್ ಇಳುವರಿ ನಿರೀಕ್ಷೆ ಇದ್ದು, ಮುಂಬೈ ಮಾರುಕಟ್ಟೆಯಲ್ಲಿ ಕನಿಷ್ಠ ₹ 12 ಲಕ್ಷ ಆದಾಯದ ನಿರೀಕ್ಷೆ ಇತ್ತು’ ಎಂದು ಅಮರೇಂದ್ರಪ್ಪ ‘ಪ್ರಜಾವಾಣಿ’ಯೊಂದಿಗೆ ಅಳಲು ತೋಡಿಕೊಂಡರು.

‘ಐದು ಎಕೆರೆಯಲ್ಲಿ ಬೆಳೆದಿದ್ದ ತೈವಾನ್ ಪಪ್ಪಾಯಿ ಖರೀದಿಸುವವರಿಲ್ಲದೇ ತಿಂಗಳ ಹಿಂದಷ್ಟೇ ಲಕ್ಷಗಟ್ಟಲೆ ನಷ್ಟವಾಗಿದೆ. ಡಿಡಿಸಿಸಿ ಬ್ಯಾಂಕ್‌ನಲ್ಲಿ ₹ 6 ಲಕ್ಷ ಸಾಲ ಮಾಡಿ ಕರಬೂಜ ಹಾಗೂ ಪಪ್ಪಾಯಿ ಬೆಳೆದಿದ್ದೆ’ ಎಂದು ಹೇಳಿದರು.

‘ಮುಂಬೈಗೆ ಲಾರಿಯಲ್ಲಿ ಸಾಗಿಸಲು ಪಾಸ್ ನೀಡುವ ಕುರಿತು ತೋಟಗಾರಿಕಾ ಇಲಾಖೆ ಅಧಿಕಾರಿಗಳು ಖಚಿತವಾಗಿ ಹೇಳುತ್ತಿಲ್ಲ’ ಎಂದು ಕರಬೂಜ ಬೆಳೆಗಾರ ಕೇಶವರೆಡ್ಡಿ ಹೇಳಿದರು.

ಅಮರೇಂದ್ರಪ್ಪ ಅವರ ಹೊಲಕ್ಕೆ ಭೇಟಿ ನೀಡಿದ್ದೇನೆ. ಬೆಳೆಯನ್ನು ಮುಂಬೈಗೆ ಸಾಗಿಸಲು ಜಿಲ್ಲಾಡಳಿತದಿಂದ ಪಾಸ್ ನೀಡಲಾಗುವುದು.
-ವೆಂಕಟೇಶ್, ಸಹಾಯಕ ನಿರ್ದೇಶಕ, ತೋಟಗಾರಿಕಾ ಇಲಾಖೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.