ಶುಕ್ರವಾರ, 13 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನಿವೃತ್ತರ ಕನಿಷ್ಠ ಪಿಂಚಣಿ ₹13,500 ನಿಗದಿ

Published : 30 ಆಗಸ್ಟ್ 2024, 0:27 IST
Last Updated : 30 ಆಗಸ್ಟ್ 2024, 0:27 IST
ಫಾಲೋ ಮಾಡಿ
Comments

ಬೆಂಗಳೂರು: ನಿವೃತ್ತ ಸರ್ಕಾರಿ ನೌಕರರ ಕನಿಷ್ಠ ಪಿಂಚಣಿಯನ್ನು ₹13,500ಕ್ಕೆ ನಿಗದಿ ಮಾಡಿ ಆರ್ಥಿಕ ಇಲಾಖೆ ಆದೇಶ ಹೊರಡಿಸಿದೆ.

7ನೇ ವೇತನ ಆಯೋಗದ ಶಿಫಾರಸಿನಂತೆ ವೇತನ ಪರಿಷ್ಕರಣೆ ಮಾಡುವ ಮೊದಲು ಕನಿಷ್ಠ ಪಿಂಚಣಿ ₹8,500 ಇತ್ತು. ₹75,300 ಇದ್ದ ಗರಿಷ್ಠ ಪಿಂಚಣಿಯನ್ನು 1,20,600ಕ್ಕೆ ಹೆಚ್ಚಳ ಮಾಡಲಾಗಿದೆ.

ನಿವೃತ್ತರ ಮರಣದ ನಂತರ ಅವರ ಕುಟುಂಬ ಪಡೆಯುವ ಪಿಂಚಣಿಯಲ್ಲೂ ಹೆಚ್ಚಳವಾಗಿದ್ದು, ₹45,180 ಇದ್ದ ಗರಿಷ್ಠ ಮೊತ್ತವನ್ನು ₹ 80,400ಕ್ಕೆ ನಿಗದಿ ಮಾಡಲಾಗಿದೆ.  

ಮೂಲ ನಿವೃತ್ತಿ ವೇತನದ ಶೇ 8.5ರಷ್ಟು ತುಟ್ಟಿಭತ್ಯೆ ನಿಗದಿ ಮಾಡಲಾಗಿದೆ. ಸರ್ಕಾರ ವರ್ಷಕ್ಕೆ ಎರಡು ಬಾರಿ ಘೋಷಿಸುವ ತುಟ್ಟಿಭತ್ಯೆಯ ಹೆಚ್ಚಳದ ಜೊತೆಗೆ ನಿವೃತ್ತರು ಹಾಗೂ ಅವರ ಕುಟುಂಬದವರಿಗೂ ಹೆಚ್ಚಳವಾಗಲಿದೆ. 70–80 ವರ್ಷ ವಯಸ್ಸಿನ ಪಿಂಚಣಿದಾರರಿಗೆ ಮೂಲ ಪಿಂಚಣಿಯ ಹೆಚ್ಚುವರಿ ಶೇ 10 ಸಿಗಲಿದೆ. ಮರಣ ಉಪಧನವನ್ನು ಗರಿಷ್ಠ ₹20 ಲಕ್ಷಕ್ಕೆ ಮಿತಿಗೊಳಿಸಲಾಗಿದೆ. 

ಈ ಆದೇಶವು ಜುಲೈ 1, 2022ರ ನಂತರ ನಿವೃತ್ತರಾದ ವಿಶ್ವವಿದ್ಯಾಲಯ ಅನುದಾನ ಆಯೋಗದ ವೇತನ ಶ್ರೇಣಿ ಸೇರಿದಂತೆ ಉನ್ನತ ವೇತನ ಶ್ರೇಣಿಗೆ ಒಳಪಟ್ಟವರಿಗೆ ಅನ್ವಯಿಸುವುದಿಲ್ಲ. ಅದಕ್ಕೂ ಪೂರ್ವದಲ್ಲಿ ನಿವೃತ್ತರಾದವರು 7ನೇ ವೇತನ ಆಯೋಗದ ಪರಿಷ್ಕೃತ ವೇತನ ಶ್ರೇಣಿ ಪಡೆಯಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT