ಮೃತಪಟ್ಟವರನ್ನು ಜೆಸ್ಸಿಕಾ (25), ಡ್ಯಾನಿಷ್ (25) ಮತ್ತು ಮೋಷಸ್ (21) ಎಂದು ಗುರುತಿಸಲಾಗಿದೆ. ಬೆಂಗಳೂರಿನ ವಿಲ್ಸನ್ ಗಾರ್ಡನ್ನಿಂದ ಇಬ್ಬರು ಯುವತಿಯರು ಮತ್ತು ಮೂವರು ಯುವಕರು ಬನ್ನೇರುಘಟ್ಟ ಅರಣ್ಯದಲ್ಲಿರುವ ಸುವರ್ಣಮುಖಿ ಕೊಳದ ಬಳಿಗೆ ಬಂದು ಕೊಳದಲ್ಲಿ ಇಳಿದಿದ್ದರು. ಈಜು ಬಾರದೇ ಮೂವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.