ಉಳ್ಳಾಲ: ಮೊಗವೀರಪಟ್ನ ಸಮುದ್ರ ವಿಹಾರಕ್ಕೆ ಸ್ನೇಹಿತನ ಜತೆಗೆ ಬಂದಿದ್ದ ವ್ಯಕ್ತಿಯೊಬ್ಬರು ಭಾನುವಾರ ಸಮುದ್ರ ಪಾಲಾಗಿದ್ದಾರೆ.

ಮೃತ ದೇಹಕ್ಕಾಗಿ ಸ್ಥಳೀಯ ಈಜುಗಾರರ ಸಂಘ ಶೋಧ ಕಾರ್ಯ ಮುಂದುವರಿಸಿದೆ. ಬೆಂಗಳೂರು ಶಿವಾಜಿನಗರ ನಿವಾಸಿ ರಿಜ್ವಾನ್(45) ಸಮುದ್ರ ಪಾಲಾದವರು.

ಗೆಳೆಯನ ಜತೆಗೆ ಉಳ್ಳಾಲ ಮೊಗವೀರಪಟ್ನ ಸಮುದ್ರ ತೀರಕ್ಕೆ ವಿಹಾರಕ್ಕೆ ಬಂದಿದ್ದರು. ಸಮುದ್ರದ ಅಲೆಗಳ ಜತೆಗೆ ಆಟವಾಡುತ್ತಿದ್ದಂತೆ ಅಪ್ಪಳಿಸಿದ ಅಲೆಗೆ ರಿಝ್ವಾನ್ ಸಮುದ್ರ ಪಾಲಾಗಿದ್ದಾರೆ. ಅಲೆಗಳ ಅಬ್ಬರಕ್ಕೆ ರಿಜ್ವಾನ್ ಅವರನ್ನು ರಕ್ಷಿಸಲು ಗೆಳೆಯನಿಗೂ ಕೂಡಾ ಸಾಧ್ಯವಾಗಲಿಲ್ಲ ಎಂದು ತಿಳಿದು ಬಂದಿದೆ. ಸಮುದ್ರಪಾಲಾದ ರಿಝ್ವಾನ್ ದೇರಳಕಟ್ಟೆಯಲ್ಲಿ ಫುಟ್‌ವೇರ್ ಅಂಗಡಿ ನಡೆಸುತ್ತಿದ್ದರು.

ಸ್ಥಳೀಯ ಈಜುಗಾರರರು ಹಾಗೂ ಪೊಲೀಸರ ಎಚ್ಚರಿಕೆಯನ್ನು ಪ್ರವಾಸಿಗರು ಗಮನಿಸುತ್ತಿಲ್ಲ. ಇದರಿಂದಾಗಿ ಇಂತಹ ಅನಾಹುತಗಳು ನಡೆಯುತ್ತಲೇ ಇವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.