ಗುಬ್ಬಿ: ತಾಲ್ಲೂಕಿನ ಎಸ್.ಕೊಡಿಗೆಹಳ್ಳಿಯ ಶ್ರೀನಿವಾಸ ಪ್ರೌಢಶಾಲೆಯ 67 ವಿದ್ಯಾರ್ಥಿಗಳು ಕಬ್ಬಿಣಾಂಶದ ಮಾತ್ರೆ ಸೇವಿಸಿ ಅಸ್ವಸ್ಥರಾಗಿದ್ದಾರೆ.

ಪ್ರತಿ ಸೋಮವಾರ ಮಾತ್ರೆನೀಡಲಾಗುತ್ತದೆ. ಆಶಾ ಕಾರ್ಯಕರ್ತೆರು ನೀಡಿದ ಮಾತ್ರೆಗಳನ್ನು ಮಂಗಳವಾರ ಶಿಕ್ಷಕರು ನೀಡಿದ್ದರು.

ಮನೆಗೆ ತೆರಳಿದ ಮಕ್ಕಳಲ್ಲಿ ವಾಂತಿ, ಹೊಟ್ಟೆನೋವು ಕಾಣಿಸಿಕೊಂಡಿದೆ. ಬುಧವಾರ ಬೆಳಿಗ್ಗೆ ಶಾಲೆಯಲ್ಲಿ ಪ್ರಾರ್ಥನೆ ಸಲ್ಲಿಸುವಾಗ ಕೆಲ ವಿದ್ಯಾರ್ಥಿಗಳು ತಲೆ ಸುತ್ತಿ ಬಿದ್ದಿದ್ದಾರೆ.

ಕೆಲವರಿಗೆ ಸ್ಥಳೀಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಕೊಡಿಸಿದರೆ 14 ಮಂದಿಯನ್ನು ಗುಬ್ಬಿ ತಾಲ್ಲೂಕು ಆಸ್ಪತ್ರೆ ಮತ್ತು ಇಬ್ಬರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ‘ಮಾತ್ರೆ ಸೇವಿಸಲು ಬಳಸಿರುವ ನೀರು ಮತ್ತು ಆಹಾರದಿಂದ ಈ ರೀತಿ ಆಗಿದೆ. ಆತಂಕ ಬೇಡ’ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಬಿ.ಸಿ.ಬಿಂಧು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.