ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ದಾವಣಗೆರೆ: ಸಿದ್ದರಾಮಯ್ಯ ಜನ್ಮದಿನಕ್ಕೆ ಬಂದಿದ್ದ ಇಬ್ಬರು ಸಾವು

Last Updated 9 ಆಗಸ್ಟ್ 2022, 22:30 IST
ಅಕ್ಷರ ಗಾತ್ರ

ಹರಿಹರ: ಆಗಸ್ಟ್‌ 3ರಂದು ಇಲ್ಲಿ ನಡೆದಿದ್ದ ಸಿದ್ದರಾಮಯ್ಯ ಜನ್ಮದಿನ ಸಮಾರಂಭದಲ್ಲಿ ಪಾಲ್ಗೊಳ್ಳಲು ದಾವಣಗೆರೆಗೆ ಬಂದಿದ್ದ ಇಬ್ಬರು ವ್ಯಕ್ತಿಗಳು ಅಪರಿಚಿತ ವಾಹನ ಡಿಕ್ಕಿ ಹೊಡೆದು ಮೃತಪಟ್ಟಿರುವ ಘಟನೆ ತಾಲ್ಲೂಕಿನ ಹರಗನಹಳ್ಳಿ ಗ್ರಾಮದ ಸಾಗರ್ ಡಾಬಾ ಮುಂಭಾಗದ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ನಡೆದಿದೆ.

ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲ್ಲೂಕಿನ ಕಿಲಬನೂರು ಗ್ರಾಮದ ದಂಡ್ಯೆಪ್ಪ ಅವರ ಪುತ್ರ ಬಸಪ್ಪ ದುಂಡಪ್ಪ ಸುನ್ನಾಳ್ (38), ಪಾಂಡವಪುರ ತಾಲ್ಲೂಕಿನ ಅರಳಕುಪ್ಪೆ ಗ್ರಾಮದ ವೃದ್ಧ ಸ್ವಾಮಿಗೌಡ (73) ಮೃತರು.

ಆಗಸ್ಟ್ 4ರ ಮುಂಜಾನೆ 2.30ರ ವೇಳೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪರಿಚಿತ ವಾಹನ ಡಿಕ್ಕಿ ಹೊಡೆದು ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾಗಿ ಗಸ್ತು ತಿರುಗುತ್ತಿದ್ದ ಪೊಲೀಸರಿಗೆ ಸಾರ್ವಜನಿಕರು ಮಾಹಿತಿ ನೀಡಿದ್ದರು. ಸಿ.ಜಿ. ಆಸ್ಪತ್ರೆಯಲ್ಲಿ ಇರಿಸಿದ್ದ ಮೃತದೇಹ
ವನ್ನು ಸಂಬಂಧಿಗಳು ಗುರುತಿಸಿದ್ದಾರೆ.

‘ಸಿದ್ದರಾಮಯ್ಯ ಅವರ ಜನ್ಮದಿನಕ್ಕಾಗಿ ಬಸ್‌ನಲ್ಲಿ ಕರೆತಂದಿದ್ದವರು ಬಸ‍ಪ್ಪ ಅವರಿಗಾಗಿ ಕೆಲ ಗಂಟೆಗಳ ಕಾದಿದ್ದಾರೆ. ಬಸ್‌ನಲ್ಲಿ ಮಹಿಳೆಯರು ಇದ್ದುದರಿಂದ ತಡವಾಗುತ್ತದೆ ಎಂದು ಹೇಳಿ ಹೊರಟು ಹೋಗಿದ್ದಾರೆ’ ಎಂದು ಮೃತರ ಸಹೋದರ ಮಂಜುನಾಥ್
ತಿಳಿಸಿದರು.

ಅಪಘಾತದಲ್ಲಿ ಮೃತಪಟ್ಟಿರುವುದು ತಡವಾಗಿ ಗೊತ್ತಾಗಿದೆ. ವಾರಸುದಾರರು ಶವವನ್ನು ಗುರುತಿಸಿ ಕೊಂಡೊಯ್ದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT