ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಟಿಪ್ಪು ಮೈಮೇಲೆ ಬಂದಂತೆ ವರ್ತಿಸುವ ಸಿದ್ಧರಾಮಯ್ಯ: ಆರ್. ಅಶೋಕ್ ಆರೋಪ

ರಾಜ್ಯದಲ್ಲಿ ತಾಲಿಬಾನ್ ಸರಕಾರ ನಡೆಸುತ್ತಿದ್ದಾರೆ: ಅಶೋಕ್ ಆರೋಪ
Published 12 ಜೂನ್ 2024, 7:39 IST
Last Updated 12 ಜೂನ್ 2024, 7:39 IST
ಅಕ್ಷರ ಗಾತ್ರ

ಉಳ್ಳಾಲ(ದಕ್ಷಿಣ ಕನ್ನಡ): 'ಉಳ್ಳಾಲ ತಾಲ್ಲೂಕಿನ ಬೋಳಿಯಾರ್ ನಲ್ಲಿ ಬಿಜೆಪಿಯ ಇಬ್ಬರು ಕಾರ್ಯಕರ್ತರಿಗೆ ಚೂರಿ ಇರಿದಿರುವುದು ಪೂರ್ವಯೋಜಿತ ಕೃತ್ಯ. ಟಿಪ್ಪು ಮೈಮೇಲೆ ಬಂದಂತೆ ನಡೆದುಕೊಳ್ಳುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದಲ್ಲಿ ತಾಲಿಬಾನ್ ಸರ್ಕಾರ ನಡೆಸುತ್ತಿದ್ದಾರೆ' ಎಂದು ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಹೇಳಿದರು.

ಬೋಳಿಯಾರ್ ಚೂರಿ ಇರಿತ ಪ್ರಕರಣದಲ್ಲಿ ಗಾಯಗೊಂಡ ಹರೀಶ್ ಹಾಗು ನಂದ ಕುಮಾರ್ ಅವರ ಆರೋಗ್ಯ ವಿಚಾರಿಸಿದ ಅವರು ಬಳಿಕ ಮಾಧ್ಯಮದ ಜೊತೆಗೆ ಬುಧವಾರ ಮಾತನಾಡಿದರು.

'ಡ್ಯಾಗರ್ ನಿಂದ ಇರಿದಿರುವುದನ್ನು ಗಮನಿಸಿದರೆ ಇದೊಂದು ಪೂರ್ವಯೋಜಿತ ಕೃತ್ಯದಂತೆ ಕಾಣಿಸುತ್ತದೆ. ತಕ್ಷಣಕ್ಕೆ ಡ್ಯಾಗರ್ ಎಲ್ಲಿಂದ ಬರುತ್ತೇ. ಭಾರತ್ ಮಾತಾ ಕಿ ಜೈ ಅನ್ನುವ ಘೋಷಣೆ ವೀಡಿಯೋ ಗಮನಿಸಿದ್ದೇನೆ. ಮಸೀದಿ ಮುಂದೆ ಭಾರತ್ ಮಾತಾ ಕಿ ಜೈ ಅಂದಿದ್ದಾರೆ‌. ದೇಶದಲ್ಲಿ ಎಲ್ಲಿಯೂ ದೇಶಕ್ಕೆ ಜೈ ಅಂದಲ್ಲಿ ಸನ್ಮಾನ ಮಾಡ್ತಾರೆ, ಕರ್ನಾಟಕದಲ್ಲಿ ಹಾಗೂ ಮಂಗಳೂರು- ಉಡುಪಿ ಭಾಗದಲ್ಲಿ ಭಾರತ್ ಮಾತಾ ಕಿ ಜೈ ಅಂದಲ್ಲಿ ಡ್ಯಾಗರ್ನಿಂದ ಇರಿಯುವ ಕೃತ್ಯಗಳು ನಡೆಯುತ್ತಿವೆ. ರಾಜ್ಯದಲ್ಲಿರುವ ತಾಲಿಬಾನ್ ಸರ್ಕಾರವನ್ನು ಹೇಳೋರೂ ಕೇಳೋರು ಯಾರು ಇಲ್ಲದಾಗಿದೆ ಎಂದರು.

ಸಿದ್ದರಾಮಯ್ಯವನಡವಳಿಕೆಗಳೆಲ್ಲವೂ ಟಿಪ್ಪು ರೀತಿಯಲ್ಲೇ ಇವೆ. ಹಿಂದಿನ ಸಿದ್ದರಾಮಯ್ಯ ಆಡಳಿತ ಅವಧಿಯಲ್ಲಿ ಬೆಂಗಳೂರಿನ ಶಿವಾಜಿನಗರದಲ್ಲಿ ಕೊಲೆಗಳಾದವು. ಅಲ್ಲದೆ ಇಡೀ ರಾಜ್ಯದಲ್ಲೇ 30-40 ಕೊಲೆಗಳು ನಡೆದಿವೆ. ಇದೀಗ ಮತ್ತೆ ಕರ್ನಾಟಕ ಕೊಲೆಗಳ ರಾಜ್ಯ ಆಗುತ್ತಿದೆ. ನ್ಯಾಷನಲ್ ಕ್ರೈಂ ರೆಕಾರ್ಡ್ ಬ್ಯೂರೊ ಅಂಕಿ ಅಂಶದ ಪ್ರಕಾರ ಕರ್ನಾಟಕದಲ್ಲಿ ಶೇ 40ರಷ್ಟು ಅಪರಾಧ ಈ ವರ್ಷದಲ್ಲಿ ಜಾಸ್ತಿಯಾಗಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದಲ್ಲಿ ಗೂಂಡಾಗಳಿಗೆ, ತಾಲಿಬಾನಿಗಳಿಗೆ ಪಾಕಿಸ್ತಾನದ ಏಜೆಂಟರರಿಗೆ ಹಬ್ಬ ಆಗುತ್ತದೆ. ಪೊಲೀಸರು ಖುದ್ದಾಗಿ ಕೌಂಟರ್ ಕೇಸ್ ಹಾಕಿಸುವ ಮೂಲಕ ಕಾಂಪ್ರಮೈಸ್ ಮಾಡುವ ಕಾರ್ಯಗಳಾಗುತ್ತಿದೆ. ಬೋಳಿಯಾರ್ ಪ್ರಕರಣಕ್ಕೆ ಕಾಂಗ್ರೆಸ್ ನವರು ತಕ್ಕ ಬೆಲೆ ತೆರಲೇಬೇಕಾಗುತ್ತದೆ ಎಂದರು. ಹಲ್ಲೆಗೊಳಗಾದವರು ಪಾಕಿಸ್ತಾನದ ಕುನ್ನಿಗಳೇ ಅಂದಿರುವ ದಾಖಲೆಗಳನ್ನು ಪೊಲೀಸ್ ಕಮೀಷನರ್ ಬಳಿಯೇ ಕೇಳುತ್ತೇನೆ. ಜೈ ಶ್ರೀ ರಾಮ್, ಭಾರತ್ ಮಾತಾ ಕಿ ಜೈ ಅನ್ನೋರಿಗೆ ಡ್ಯಾಗರ್ ನಿಂದ ಕೊಲೆಯತ್ನ ಮಾಡಲಾಗುತ್ತಿದೆ. ವಿಧಾನಸೌಧದಲ್ಲಿ ಪಾಕಿಸ್ತಾನ ಜೈ ಅಂದವರಿಗೆ ಬಿರಿಯಾನಿ ನೀಡಿ ಬೇಲ್ ಕೊಟ್ಟು ವಾಪಸ್ಸು ಕಳುಹಿಸ್ತಾ ಇದ್ದಾರೆ‌. ಗೃಹಸಚಿವರೇ ಜವಾಬ್ದಾರಿ ಅರ್ಥಾ ಆಗುತ್ತಿಲ್ವ. ಇಡೀ ಪ್ರಕರಣದ ಕುರಿತು ವಿಧಾನಸಭೆಯಲ್ಲಿ ಧ್ವನಿ ಎತ್ತುತ್ತೇನೆ. ಪರಿಹಾರ ಕ್ರಮದ ಕುರಿತು ಜಿಲ್ಲಾಧಿಕಾರಿಗಳ ಜೊತೆಗೆ ಚರ್ಚಿಸುತ್ತೇನೆ ಎಂದರು.

ಈ ಸಂದರ್ಭ ಸಂಸದ ಬೃಜೇಶ್ ಚೌಟ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸತೀಶ್ ಕುಂಪಲ, ಶಾಸಕರಾದ ಡಾ.ವೈ.ಭರತ್ ಶೆಟ್ಟಿ, ವೇದವ್ಯಾಸ ಕಾಮತ್, ವಿದಾನಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್, ಮುಖಂಡರಾದ ಹೇಮಂತ್ ಶೆಟ್ಟಿ ದೇರಳಕಟ್ಟೆ, ಅನಿಲ್ ಬಗಂಬಿಲ ಮೊದಲಾದವರು ಜೊತೆಯಲ್ಲಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT