ಗುರುವಾರ, 21 ಆಗಸ್ಟ್ 2025
×
ADVERTISEMENT
ADVERTISEMENT

ಯುಯುಸಿಎಂಎಸ್‌ ನಿರ್ವಹಣಾ ವೈಫಲ್ಯ: ‘ಅಂಕೆ’ಗೆ ಸಿಗದ ಡಿಜಿಟಲ್ ಅಂಕಪಟ್ಟಿ

* ಉನ್ನತ ಶಿಕ್ಷಣ, ಉದ್ಯೋಗಕ್ಕೂ ಅಡ್ಡಿ
Published : 8 ನವೆಂಬರ್ 2024, 0:55 IST
Last Updated : 8 ನವೆಂಬರ್ 2024, 0:55 IST
ಫಾಲೋ ಮಾಡಿ
Comments
ಕಾಲೇಜುಗಳಿಗೆ ನೋಟಿಸ್‌
ಎಂಜಿನಿಯರಿಂಗ್‌ ಕೋರ್ಸ್‌ಗಳ ‘ಸೀಟ್‌ ಬ್ಲಾಕಿಂಗ್‌’ ಪ್ರಕರಣದಲ್ಲಿ ಕಾಲೇಜುಗಳಿಗೆ ನೋಟಿಸ್‌ ನೀಡಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ನಿರ್ಧರಿಸಿದೆ. ‘ಸೀಟು ಹಂಚಿಕೆಯಾಗಿದ್ದರೂ, ಎಂಜಿನಿಯರಿಂಗ್‌ ಕಾಲೇಜುಗಳಿಗೆ ಏಕೆ ಪ್ರವೇಶ ಪಡೆದಿಲ್ಲ’ ಎಂದು ಪ್ರಶ್ನಿಸಿ ಕೆಇಎ ನೀಡಿದ್ದ ನೋಟಿಸ್‌ಗೆ ಶೇ 80ರಷ್ಟು ವಿದ್ಯಾರ್ಥಿಗಳು ‘ಈ ಕುರಿತು ತಮಗೆ ಮಾಹಿತಿಯೇ ಇಲ್ಲ’ ಎಂದು ಉತ್ತರಿಸಿದ್ದಾರೆ. ಹಾಗಾಗಿ, ಸಿಇಟಿ ಮೂಲಕ ಹಂಚಿಕೆಯಾದ ಬೇಡಿಕೆ ಇರುವ ಕೋರ್ಸ್‌ಗಳ ಸೀಟುಗಳು ಅಧಿಕ ಸಂಖ್ಯೆಯಲ್ಲಿ ಉಳಿದಿರುವ ಕಾಲೇಜುಗಳಿಗೆ ವಿವರಣೆ ಕೇಳಿ ನೋಟಿಸ್‌ ನೀಡಲಾಗುತ್ತಿದೆ. ಸಿಇಟಿಯಲ್ಲಿ ಉನ್ನತ ರ್‍ಯಾಂಕ್‌ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳು ಎರಡನೇ ಸುತ್ತು ಪೂರ್ಣಗೊಳ್ಳುವವರೆಗೂ ಸೀಟು ಹಿಡಿದಿಟ್ಟುಕೊಂಡು ಕೊನೆಯ ಸುತ್ತಿನ ನಂತರ ತಮಗೆ ಹಂಚಿಕೆಯಾದ ಪ್ರಮುಖ ಕಾಲೇಜುಗಳಿಗೆ ಪ್ರವೇಶ ಪಡೆಯದೇ ಇತರೆ ವಿದ್ಯಾರ್ಥಿಗಳಿಗೆ ನಷ್ಟ ಮಾಡಿದ್ದಾರೆ ಎಂದು ಕೆಇಎ ದೂರಿತ್ತು. ‘ಸೀಟ್‌ ಬ್ಲಾಕಿಂಗ್’ ಅಕ್ರಮ ನಡೆದಿರುವ ಶಂಕೆಯ ಮೇಲೆ 2,348 ವಿದ್ಯಾರ್ಥಿಗಳಿಗೆ ನೋಟಿಸ್‌ ನೀಡಿತ್ತು. ‘ಜೆಇಇ, ಕಾಮೆಡ್‌–ಕೆ ಮತ್ತು ಇತರ ಅರ್ಹತಾ ಪರೀಕ್ಷೆಗಳತ್ತ ಚಿತ್ತ ಹರಿಸಿದ್ದರಿಂದ ಸಿಇಟಿ ಸೀಟು ಹಂಚಿಕೆಯ ಬಗ್ಗೆ ಗಮನಿಸಲಿಲ್ಲ. ಈ ಕುರಿತು ತಮಗೆ ಮಾಹಿತಿಯೇ ಇಲ್ಲ’ ಎಂದು ವಿದ್ಯಾರ್ಥಿಗಳು ನೀಡಿದ ಉತ್ತರವನ್ನು ಗಂಭೀರವಾಗಿ ತೆಗೆದುಕೊಂಡಿರುವ ಕೆಇಎ, ಅಕ್ರಮದಲ್ಲಿ ಆಯಾ ಕಾಲೇಜುಗಳೇ ಭಾಗಿಯಾಗಿರುವ ಕುರಿತು ಮತ್ತಷ್ಟು ಮಾಹಿತಿ ಕಲೆಹಾಕುತ್ತಿದೆ.
ಅಂಕಪಟ್ಟಿಗೇ ಕನ್ನ
ಯುಯುಸಿಎಂಎಸ್‌ಗೆ ಅಪ್‌ಲೋಡ್‌ ಮಾಡಿದ್ದ ಡಿಜಿಟಲ್‌ ಅಂಕಪಟ್ಟಿಯಲ್ಲಿನ ಅಂಕಗಳು ದಿಢೀರ್‌ ಏರುಪೇರಾಗುತ್ತಿರುವ ಪ್ರಕರಣದ ತನಿಖೆ ನಡೆಸಲು ಕೋರಿ ಕೆಲ ವಿಶ್ವವಿದ್ಯಾಲಯಗಳು ಪೊಲೀಸ್‌ ಠಾಣೆಯ ಮೆಟ್ಟಲೇರಿವೆ. ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಯುಯುಸಿಎಂಎಸ್‌ ತಂತ್ರಾಂಶದ ವೆಬ್‌ಸೈಟ್‌ ಹ್ಯಾಕ್‌ ಮಾಡಲಾಗಿದೆ. ಅನುತ್ತೀರ್ಣರಾದ ಕೆಲ ವಿದ್ಯಾರ್ಥಿಗಳ ಅಂಕಗಳಲ್ಲಿ ಹೆಚ್ಚಳವಾಗಿ ತೇರ್ಗಡೆಯಾಗಿದ್ದಾರೆ ಎಂದು ಪರೀಕ್ಷಾಂಗ ಕುಲಸಚಿವ ಕೆ. ತಿಪ್ಪೇಸ್ವಾಮಿ ಕೋಲಾರದ ಸೈಬರ್‌ ಅಪರಾಧ ಹಾಗೂ ಮಾದಕ ವಸ್ತುಗಳ ನಿಯಂತ್ರಣ ಠಾಣೆಯಲ್ಲಿ (ಸೆನ್‌) ದೂರು ದಾಖಲಿಸಿದ್ದರು. ತನಿಖೆ ನಡೆಸಿದ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಕೆಲ ವಿಶ್ವವಿದ್ಯಾಲಯಗಳಲ್ಲಿ ವಂಚಕರ ಗುಂಪುಗಳು ವಿದ್ಯಾರ್ಥಿಗಳಿಂದ ಹಣ ಪಡೆದು ವೆಬ್‌ಸೈಟ್‌ಗೆ ಲಾಗಿನ್‌ ಆಗಿ ಅಂಕ ಬದಲಾವಣೆ ಹಾಗೂ ಅನುತ್ತೀರ್ಣರಾದವರನ್ನು ತೇರ್ಗಡೆ ಮಾಡಿಸುತ್ತಿರುವುದು ಪತ್ತೆಯಾಗಿವೆ. ಎಂ.ಬಿ.ಎ ಹಾಗೂ ಎಂ.ಸಿ.ಎ ಅಂಕಪಟ್ಟಿಗಳೇ ಅಧಿಕ ಸಂಖ್ಯೆಯಲ್ಲಿ ತಿದ್ದುಪಡಿಗೆ ಒಳಗಾಗಿವೆ.
ತಾಂತ್ರಿಕ ದೋಷ, ಪರದಾಟ
ಹಲವು ವಿಶ್ವವಿದ್ಯಾಲಯಗಳು 2024–25ನೇ ಸಾಲಿನ ಸ್ನಾತಕೋತ್ತರ ಪದವಿ ಕೋರ್ಸ್‌ಗಳ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಿವೆ. ಯುಯುಸಿಎಂಎಸ್‌ ತಂತ್ರಾಂಶದಲ್ಲಿ ದೋಷಗಳು ಕಾಣಿಸಿಕೊಂಡ ಕಾರಣ ಮತ್ತೊಂದು ಸುತ್ತೋಲೆ ಹೊರಡಿಸಿ, ಭೌತಿಕವಾಗಿ ಅರ್ಜಿ ಸಲ್ಲಿಸಲು ಸೂಚಿಸಿವೆ. ಬಳ್ಳಾರಿ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ ಕೆಲ ಕಾಲೇಜುಗಳಲ್ಲಿ ಪ್ರಥಮ ಸೆಮಿಸ್ಟರ್ ಫಲಿತಾಂಶ ಎರಡು ವರ್ಷವಾದರೂ ಪ್ರಕಟಗೊಂಡಿಲ್ಲ, ಎರಡು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಮೂಲ ಅಂಕಪಟ್ಟಿಯೇ ಸಿಕ್ಕಿಲ್ಲ. ಅಂತಹ ವಿದ್ಯಾರ್ಥಿಗಳಿಗೆ ಸ್ನಾತಕೋತ್ತರ ಅಧ್ಯಯನಕ್ಕೆ ತೆರಳಲು ಸಾಧ್ಯವಾಗುತ್ತಿಲ್ಲ. ಮಂಗಳೂರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಡಿಜಿಲಾಕರ್‌ನಿಂದ ಅಂಕಪಟ್ಟಿ ಪ್ರತಿ ಡೌನ್‌ಲೋಡ್‌ ಮಾಡಿಕೊಳ್ಳುವಾಗ ತೊಂದರೆ ಎದುರಿಸುತ್ತಿದ್ದು, ಸಮಸ್ಯೆ ಬಗೆಹರಿಸಲು ಕ್ರಮ ವಹಿಸುವಂತೆ ವಿಶ್ವವಿದ್ಯಾಲಯದ ಪರೀಕ್ಷಾಂಗ ಕುಲಸಚಿವ ಎಚ್‌.ದೇವೇಂದ್ರಪ್ಪ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT