ವಿಚಾರಣೆ ವೇಳೆ ಇಡಿ ಪರ ಹಾಜರಾಗಿದ್ದ ಪಿ.ಪ್ರಸನ್ನ ಕುಮಾರ್, ಪ್ರಕರಣದ ಎರಡನೇ ಆರೋಪಿ ಸತ್ಯನಾರಾಯಣ ವರ್ಮ ವಿರುದ್ಧ ಜಾರಿ ನಿರ್ದೇಶನಾಲಯ (ಇಡಿ) ಇಸಿಐಆರ್ (ಎನ್‌ಫೋರ್ಸ್‌ಮೆಂಟ್ ಕೇಸ್ ಇನ್‌ಫಾರ್ಮೇಶನ್ ರಿಪೋರ್ಟ್) ದಾಖಲಿಸಿದೆ. ಈ ಸಂಬಂಧ ಇಡಿ ಕೋರಿದ್ದ ಅರ್ಜಿಯನ್ನು ಮಾನ್ಯ ಮಾಡಿದ್ದ ಕೋರ್ಟ್ ಅವರ ವಿರುದ್ಧ ಎರಡು ಬಾರಿ ಬಾಡಿ ವಾರಂಟ್ ಹೊರಡಿಸಿ ಆದೇಶಿಸಿತ್ತು. ಆದರೆ, ಕೋರ್ಟ್‌ನ ಈ ಆದೇಶವನ್ನು ಉಲ್ಲಂಘಿಸಿದ ಜೈಲು ಅಧಿಕಾರಿಗಳು ಅವರನ್ನು ಹಗರಣಕ್ಕೆ ಸಂಬಂಧಿಸಿದ ಮೂರನೇ ಪ್ರಕರಣದಲ್ಲಿ ರಾಜ್ಯ ಸರ್ಕಾರದ ಅಧೀನದಲ್ಲಿರುವ ತನಿಖಾ ಸಂಸ್ಥೆಗಳ ವಿಚಾರಣೆಗಾಗಿ ಅವರ ವಶಕ್ಕೆ ಒಪ್ಪಿಸಿದೆ’ ಎಂದು ಆಕ್ಷೇಪಿಸಿದರು.