ಹುಬ್ಬಳ್ಳಿ: ‘ವೋಟಿಗಾಗಿ ಬಿಜೆಪಿ ಮುಖಂಡರು ಬಸವಣ್ಣನ ಹೆಸರು ಹೇಳಿಕೊಂಡು ಅಡ್ಡಾಡುತ್ತಿದ್ದಾರೆ. ತಾಕತ್ತಿದ್ದರೆ ಆರ್‌ಎಸ್‌ಎಸ್ ಕಚೇರಿಯಲ್ಲಿ ಬಸವಣ್ಣನ ಫೋಟೊ ಹಾಕಲಿ’ ಎಂದು ಧಾರವಾಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಲಕರ್ಣಿ ಸವಾಲು ಹಾಕಿದರು.

ನಗರದಲ್ಲಿ ಬುಧವಾರ ಏರ್ಪಡಿಸಿದ್ದ ಲಿಂಗಾಯತ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು.

ಕಳೆದ ಚುನಾವಣೆಯಲ್ಲಿ ರಾಜ್ಯದಿಂದ 9 ಮಂದಿ ಲಿಂಗಾಯತ ಸಂಸದರು ಆಯ್ಕೆಯಾಗಿದ್ದರು. ಆದರೆ, ಬಿಜೆಪಿಯು ಯಾರೊಬ್ಬನ್ನೂ ಸಚಿವರನ್ನಾಗಿ ಮಾಡಲಿಲ್ಲ. ಬದಲಿಗೆ ಬ್ರಾಹ್ಮಣ ಸಮಾಜದಿಂದ ಆಯ್ಕೆಯಾಗಿದ್ದ ಮೂವರ ಪೈಕಿ ಅನಂತಕುಮಾರ ಹೆಗಡೆ ಮತ್ತು ಅನಂತಕುಮಾರ್ ಸಚಿವರಾದರೆ, ಪ್ರಹ್ಲಾದ ಜೋಶಿ ಅವರು ಒಎನ್‌ಜಿಸಿಗೆ ಅಧ್ಯಕ್ಷರಾದರು. ಈ ಮೂಲಕ ಲಿಂಗಾಯತ ಸಮಾಜಕ್ಕೆ ಅನ್ಯಾಯ ಮಾಡಿದರು ಎಂದರು.

‘ಟಿವಿ, ಪತ್ರಿಕೆ ನೋಡಿ ವೋಟ್ ಹಾಕಬೇಡಿ. ಮಾಧ್ಯಮಗಳಲ್ಲಿ ಶೇ 70ರಷ್ಟು ಅದಾನಿ, ಅಂಬಾನಿ ಷೇರು ಹೂಡಿಕೆ ಮಾಡಿದ್ದಾರೆ. ಈ ಮಾಧ್ಯಮಗಳಲ್ಲಿ ಮೋದಿ, ಬಿಜೆಪಿ ಸುದ್ದಿಗಳೇ ಬರುತ್ತವೆ’ ಎಂದು ಆಪಾದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.