‘ನ್ಯಾಯಾಲಯಕ್ಕೆ ಸುಳ್ಳು ಮಾಹಿತಿ’
‘ವಿಷ್ಣುವರ್ಧನ್ ಸ್ಮಾರಕ ಇರುವ ಜಾಗವನ್ನು ಖಾಸಗಿ ಕಟ್ಟಡ ಎಂದು ಬಾಲಣ್ಣ ಕುಟುಂಬದವರು ಹೈಕೋರ್ಟ್‌ನಲ್ಲಿ ಹೇಳಿದ್ದರು. ಅಲ್ಲಿ ಸ್ಮಾರಕ ಇತ್ತು ಎಂದು ದೂರಿನಲ್ಲಿ ತಿಳಿಸಲಿಲ್ಲ. ಹೀಗಾಗಿ ನ್ಯಾಯಾಲಯ ಆ ಕಟ್ಟಡ ತೆರವಿಗೆ ಆದೇಶ ನೀಡಿತು. ಈ ಸುಳ್ಳು ಮಾಹಿತಿಯಿಂದಾಗಿ ಸ್ಮಾರಕ ನೆಲಸಮವಾಗಿದೆ. ಸತ್ಯವನ್ನು ಮುಚ್ಚಿಟ್ಟು ಕುಟುಂಬದರು ಜಮೀನನ್ನು ತಮ್ಮದಾಗಿಸಿಕೊಂಡಿದ್ದಾರೆ ಎಂಬುದು ಸ್ಪಷ್ಟವಾಗಿ ತಿಳಿಯುತ್ತದೆ. ಆದರೆ ಸರ್ಕಾರಕ್ಕಿಂತ ಮೇಲೂ ಯಾರೂ ಅಲ್ಲ. ಸರ್ಕಾರ ಮನಸ್ಸು ಮಾಡಿದರೆ ಈಗಲೂ ಉಳಿದ ಜಾಗ ವಾಪಸ್ ಪಡೆದು ವಿಷ್ಣು ಸ್ಮಾರಕದ ಜಾಗವನ್ನು ಉಳಿಸಿಕೊಳ್ಳಬಹುದು. ಈಗಾಗಲೇ ಬೇರೆಡೆ ಸ್ಮಾರಕ ಇರುವುದರಿಂದ ಸರ್ಕಾರಕ್ಕೆ ಆ ಜಾಗದ ಬಗ್ಗೆ ಒಲವು ಇಲ್ಲದೇ ಇರುವುದರಿಂದ ಸ್ಮಾರಕ ಜಾಗಕ್ಕಾಗಿ ನಮ್ಮ ಸಂಘಟನೆ ಹಾಕಿದ್ದ ಇನ್ನೊಂದು ಪ್ರಕರಣವನ್ನು ನ್ಯಾಯಾಲಯ ವಜಾಗೊಳಿಸಿತು. ಸರ್ಕಾರಕ್ಕೆ ಭೂಮಿ ಮರಳಿ ಪಡೆಯುವ ಇಚ್ಛಾಶಕ್ತಿ ಬೇಕಷ್ಟೆ’ ಎಂದು ವಿಷ್ಣುಸೇನಾ ಸಮಿತಿಯ ವೀರಕಪುತ್ರ ಶ್ರೀನಿವಾಸ್ ಪ್ರತಿಪಾದಿಸಿದ್ದಾರೆ.