‘2015ರಲ್ಲಿ ನೀರಾವರಿ ಯೋಜನೆ ಅಕ್ರಮದಲ್ಲಿ ₹40 ಕೋಟಿ, 2019 ರಿಂದ 2023ರ ಅವಧಿಯಲ್ಲಿನ ಕಿಯೋನಿಕ್ಸ್‌ನಲ್ಲಿ ₹500 ಕೋಟಿ, ಕೋವಿಡ್ ನಿರ್ವಹಣೆಗೆ ಸರಂಜಾಮು ಖರೀದಿ ಹೆಸರಿನಲ್ಲಿ ₹40 ಸಾವಿರ ಕೋಟಿ, ಪಿಎಸ್‌ಐ ನೇಮಕಾತಿ ಹಗರಣದಲ್ಲಿ ₹100 ಕೋಟಿ, ಸರ್ಕಾರಿ ಗುತ್ತಿಗೆ ಮಂಜೂರಾತಿಯಲ್ಲಿ ಶೇ 40ರ ಕಮಿಷನ್‌ನಿಂದ ₹2 ಸಾವಿರ ಕೋಟಿ ಮೊತ್ತವೂ ಸೇರಿದಂತೆ ಹಲವು ಅಕ್ರಮಗಳು ನಡೆದಿವೆ’ ಎಂದು ಹಲವು ಹಗರಣಗಳನ್ನು ಅರ್ಜಿಯಲ್ಲಿ ಪಟ್ಟಿ ಮಾಡಲಾಗಿದೆ.