ಓದಿನಲ್ಲಿ ಇಂಟರೆಸ್ಟ್ ಕಳೆದುಕೊಂಡಿರುವ, ಸರಿಯಾಗಿ ಕೆಲಸ ಮಾಡದ ಯುವಕ–ಯುವತಿಯರಿಗೆ ‘ದನ ಕಾಯೋಕ್ ಹೋಗು’ ಎಂದು ಮೂದಲಿಸುವವರೇ ಅನೇಕ. ಆದರೆ, ಆ ದನ ಕಾಯುವ ಕಾಯಕದಿಂದಲೇ ಲಕ್ಷಾಂತರ ರೂಪಾಯಿ ಗಳಿಸುತ್ತಿದ್ದಾರೆ ಯಾದಗಿರಿಯ ದನಗಾಹಿಗಳು. ದಿನದಲ್ಲಿ 6 ತಾಸು ದನಗಳನ್ನು ಕಾದು ತಿಂಗಳಿಗೆ ₹ 20 ಸಾವಿರದಿಂದ ₹ 25 ಸಾವಿರದವರೆಗೂ ಜೇಬಿಗಿ ಇಳಿಸಿಕೊಂಡು ಸ್ವಾವಲಂಬಿ ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ವರ್ಷದಲ್ಲಿ 9 ತಿಂಗಳು ದನಕಾದು ಲಕ್ಷಾಂತರ ರೂಪಾಯಿ ಗಳಿಸುತ್ತಿದ್ದಾರೆ. ಉದ್ಯೋಗ ಸೃಷ್ಟಿಗೂ ಜಾನುವಾರುಗಳು ಆಧಾರವಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.