ಬೆಂಗಳೂರು: ಪ್ರತಿಷ್ಠಿತ ಛಾಯಾಗ್ರಹಣ ಸಂಸ್ಥೆ ‘ಇಮೇಜ್ ಕೊಲೀಗ್ ಸೊಸೈಟಿ ಆಫ್ ಕ್ಯಾಲಿಪೋರ್ನಿಯಾ’ದ ಅತ್ಯುನ್ನತ ‘ಮಾಸ್ಟರ್ ಐಸಿಎಸ್’ ಗೌರವಕ್ಕೆ ಯೂತ್ ಫೋಟೋಗ್ರಫಿಕ್ ಸೊಸೈಟಿಯ ಅಧ್ಯಕ್ಷ ಎಚ್. ಸತೀಶ್ ಪಾತ್ರರಾಗಿದ್ದಾರೆ. ಇವರ ‘ಇಂಡಿಯನ್ ಬರ್ಡ್ಸ್’ ಹೆಸರಿನ 25 ಡಿಜಿಟಲ್ ಚಿತ್ರಗಳು ಆರ್ಟ್ ಆಫ್ ಪೊಟೋಗ್ರಫಿ ವಿಭಾಗದಲ್ಲಿ ಪ್ರಶಂಸೆ ಗಳಿಸಿವೆ.