ಬೆಂಗಳೂರು: ಜೆಡಿಎಸ್ ಯುವ ಘಟಕದ ಅಧ್ಯಕ್ಷ ಮಧು ಬಂಗಾರಪ್ಪ ಅವರು `ಯುವ ಚೇತನ~ ಪ್ರವಾಸ ಕಾರ್ಯಕ್ರಮದ ಅಂಗವಾಗಿ ಇದೇ 10ರಿಂದ 15ರವರೆಗೆ ವಿವಿಧ ಜಿಲ್ಲೆಗಳಲ್ಲಿ ಜಿಲ್ಲಾ ಮಟ್ಟದ ಯುವ ಘಟಕದ ಕಾರ್ಯಕರ್ತರ ಸಮಾವೇಶ ಹಮ್ಮಿಕೊಂಡಿದ್ದಾರೆ.

10ರಂದು ಮಂಡ್ಯ, ಚಾಮರಾಜನಗರ, 11ರಂದು ಮೈಸೂರು, ಕೊಡಗು, 12ರಂದು ಹಾಸನ, 13ರಂದು ತುಮಕೂರು, ಚಿತ್ರದುರ್ಗ, 14ರಂದು ಶಿವಮೊಗ್ಗ, 15ರಂದು ಬೆಂಗಳೂರು ನಗರದಲ್ಲಿ ಸಮಾವೇಶ ನಡೆಯಲಿದೆ.

ಜೆಡಿಎಸ್ನ ಸಂಘಟನೆಗಾಗಿ ಈ ತಿಂಗಳಲ್ಲಿ `ನವಶಕ್ತಿಯ ಸಂಚಲನ, ದಾವಣಗೆರೆಯಲ್ಲಿ ಮಿಲನ~ ಕಾರ್ಯಕ್ರಮವನ್ನು ದಾವಣಗೆರೆಯಲ್ಲಿ ಹಮ್ಮಿಕೊಳ್ಳಲಾಗಿದೆ. ಅದಕ್ಕೆ ಪೂರ್ವಭಾವಿಯಾಗಿ ಜಿಲ್ಲಾ ಮಟ್ಟದಲ್ಲಿ ಯುವ ಘಟಕದ ಕಾರ್ಯಕರ್ತರ ಸಮಾವೇಶ ನಡೆಯುತ್ತಿದೆ ಎಂದು ಜೆಡಿಎಸ್ ಯುವ ಘಟಕದ ಕಾರ್ಯಾಧ್ಯಕ್ಷ ಬಿ.ಎಚ್.ಚಂದ್ರಶೇಖರ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.