ಬೆಂಗಳೂರು: 2011ನೇ ಸಾಲಿನ ಬಿಎಂಟಿಸಿ ನೃಪತುಂಗ ಪ್ರಶಸ್ತಿ ಗೌರವಕ್ಕೆ ಹಿರಿಯ ಸಂಶೋಧಕ ಡಾ.ಎಂ.ಎಂ.ಕಲಬುರ್ಗಿ ಪಾತ್ರರಾಗಿದ್ದಾರೆ.
ಬಿಎಂಟಿಸಿ ಮತ್ತು ಕನ್ನಡ ಸಾಹಿತ್ಯ ಪರಿಷತ್ತು ನೀಡುವ ಪ್ರಶಸ್ತಿಯ ಒಟ್ಟು ಮೊತ್ತ 5 ಲಕ್ಷದ ಒಂದು ರೂ. ನಲವತ್ತು ವರ್ಷಗಳಿಂದ ಸಂಶೋಧನಾ ಕ್ಷೇತ್ರದಲ್ಲಿ ಮಹತ್ವದ ಸಾಧನೆ ಮಾಡಿದ್ದಾರೆ.
ಸಂತಸ ತಂದಿದೆ: `ಕನ್ನಡ ನಾಡಿನ ರಾಜಕೀಯ ಮತ್ತು ಸಾಂಸ್ಕೃತಿಕ ಪರಂಪರೆಯಲ್ಲಿ ದೊಡ್ಡ ಹೆಸರಿರುವ ನೃಪತುಂಗ ಚಕ್ರವರ್ತಿ ಹೆಸರಿನ ಪ್ರಶಸ್ತಿಗೆ ಪುರಸ್ಕೃತನಾಗಿರುವುದು ಅತೀವ ಸಂತಸ ತಂದಿದೆ~ ಎಂದು ಸಂಶೋಧಕ, ವಿಶ್ರಾಂತ ಕುಲಪತಿ ಡಾ. ಎಂ.ಎಂ.ಕಲಬುರ್ಗಿ ಧಾರವಾಡದಲ್ಲಿ `ಪ್ರಜಾವಾಣಿ~ಗೆ ಪ್ರತಿಕ್ರಿಯಿಸಿದ್ದಾರೆ.