ಕಾರ್ಕಳ: ನಕ್ಸಲ್ ಬೆಂಬಲಿತ ಬರಹಗಳಿರುವ 5 ಬ್ಯಾನರ್, 4 ಭಿತ್ತಿಫಲಕ, 3 ಬಾವುಟ ಹಾಗೂ 7 ಮುದ್ರಿತ ಮತ್ತು 7 ಕೈಬರಹದ ಭಿತ್ತಿಪತ್ರಗಳನ್ನು ತಾಲ್ಲೂಕಿನ ನೂರಾಳ್ಬೆಟ್ಟು ಗ್ರಾಮದಲ್ಲಿ ಗ್ರಾಮಾಂತರ ಪೊಲೀಸರು ಶನಿವಾರ ವಶಕ್ಕೆ ಪಡೆದಿದ್ದಾರೆ.
ಗ್ರಾಮದ ಪುಂಜಾಜೆ ಎಂಬಲ್ಲಿನ ಕಿರಿಯ ಪ್ರಾಥಮಿಕ ಶಾಲೆ, ಅಂಗನವಾಡಿ ಕಾಂಪೌಂಡ್ ಮತ್ತು ಶೀಟು ಹಾಕಿ ನಿರ್ಮಿಸಿದ ತಾತ್ಕಾಲಿಕ ಬಸ್ಸ್ಟಾಂಡ್ಗಳಲ್ಲಿ ಈ ಬರಹಗಳು ಕಂಡು ಬಂದಿವೆ.
ಈ ಭಿತ್ತಪತ್ರಗಳಲ್ಲಿ ಸಾರ್ವಜನಿಕರು ಸರ್ಕಾರದ ವಿರುದ್ಧವಾಗಿ ಬಂಡೇಳಬೇಕು ಹಾಗೂ ನಕ್ಸಲ್ ಚಟುವಟಿಕೆಗಳಿಗೆ ಬೆಂಬಲ ನೀಡಬೇಕು ಎಂದು ಬರೆಯಲಾಗಿದೆ.